ಮೊಬೈಲ್ ಸುಲಿಗೆ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2018-08-19 17:15 GMT

ಮಂಗಳೂರು, ಆ.19: ನಗರದ ನೆಹರೂ ಮೈದಾನ ಸಮೀಪ ಸಶಸ ಮೀಸಲು ಪಡೆ ಪೊಲೀಸ್ ಕಾನ್‌ಸ್ಟೇಬಲ್ ಶ್ರೀನಿವಾಸ್ ಎಂಬವರ ಮೊಬೈಲ್ ಹಾಗೂ ನಗದು ದೋಚಿದ ಪ್ರಕರಣದ ಮೂವರು ಕಳ್ಳರನ್ನು ಪಾಂಡೇಶ್ವರ ಪೊಲೀಸರು ಮತ್ತು ದಕ್ಷಿಣ ರೌಡಿ ನಿಗ್ರಹದಳದ ಸಿಬ್ಬಂದಿ ಬಂಧಿಸಿದ್ದಾರೆ.

ಚಿಕ್ಕಮಗಳೂರು ನಿವಾಸಿ ಯತೀಶ್ ಎಂ.ಎಸ್. ಯಾನೆ ಯತೀ, ಅಶ್ರ್ ಯಾನೆ ಮುಹಮ್ಮದ್ ಅಶ್ರ್ ಯಾನೆ ನಿಜಾಮ್ ಹಾಗೂ ಮಹಮ್ಮದ್ ಅಶ್ರ್ ಯಾನೆ ಅಜ್ಜು ಬಂಧಿತ ಆರೋಪಿಗಳು.

3 ತಿಂಗಳ ಹಿಂದೆ ಕಾನ್‌ಸ್ಟೇಬಲ್ ಶ್ರೀನಿವಾಸ ಅವರು ನಗರದ ನೆಹರೂ ಮೈದಾನದ ಒಳಭಾಗದಲ್ಲಿ ರಾತ್ರಿ ವೇಳೆ ನಡೆದುಕೊಂಡು ಬರುತ್ತಿರುವಾಗ 3 ಜನ ಅಪರಿಚಿತರು ಏಕಾಏಕಿ ಅವರನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ಮೊಬೈಲ್‌ೆನ್, ಪರ್ಸ್‌ನಲ್ಲಿದ್ದ 450ರೂ. ಸುಲಿಗೆ ಪರಾರಿಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ನಟೋರಿಯಸ್:  ಈ ಪ್ರಕರಣದ ಪ್ರಮುಖ ಆರೋಪಿ ಯತೀಶ್ ಹಾಗೂ ಈತನ ಸಹಚರ ರವಿ ಯಾನೆ ಶಂಕರಲಿಂಗೇಗೌಡರೊಂದಿಗೆ ಸೇರಿಕೊಂಡು ಬೆಂಗಳೂರು ನಗರ ಮತ್ತು ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳಲ್ಲಿ ಸರಗಳ್ಳತನ ಮತ್ತು ದ್ವಿಚಕ್ರ ವಾಹನ ಕಳ್ಳತನ ಮಾಡಿರುವ ಬಗ್ಗೆ ವಿಚಾರಣೆಯಲ್ಲಿ ತಿಳಿದುಬಂದಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಡಿಸಿಪಿಗಳಾದ ಹನುಮಂತರಾಯ, ಉಮಾಪ್ರಶಾಂತ್, ಎಸಿಪಿ ರಾಮರಾವ್ ಮಾರ್ಗ ದರ್ಶದನದಲ್ಲಿ ಪಾಂಡೇಶ್ವರ ಠಾಣಾ ಇನ್‌ಸ್ಪೆಕ್ಟರ್ ಸಾಯಿನಾಥ ಎಂ. ರಾಣೆ, ಉಪ ನಿರೀಕ್ಷಕ ರಾಜೇಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News