ಕೋಳಿ ಅಂಕಕ್ಕೆ ದಾಳಿ: ನಾಲ್ವರ ವಶಕ್ಕೆ

Update: 2018-08-19 17:22 GMT

ಬಂಟ್ವಾಳ, ಆ. 19: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಕೊಂಡ ಘಟನೆ ವಿಟ್ಲ ಮುಡ್ನೂರು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.

ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ನಿವಾಸಿಗಳಾದ ಎಲ್ಯಣ್ಣ ಪೂಜಾರಿ, ಕೃಷ್ಣ ನಾಯ್ಕ, ಪೂವಪ್ಪ ಹಾಗೂ ದಾಮೋದರ ಬಂಧಿತ ಆರೋಪಿಗಳು. ಬಂಧಿತರು ವಿಟ್ಲ ಮುಡ್ನೂರು ಗ್ರಾಮದ ಕೆಮನಾಜೆ ಎಂಬಲ್ಲಿ ಕೋಳಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಟ್ಲ ಎಸೈ ಯಲ್ಲಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿಗಳಿಂದ ನಾಲ್ಕು ಕೋಳಿ ಹಾಗೂ 10 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News