ಪಶ್ಚಿಮ ಫ್ರಾನ್ಸ್ ಸಾಗರದಲ್ಲಿ ವಿರಳ ಬಾಸ್ಕಿನ್ ಶಾರ್ಕ್‌ಗಳನ್ನು ಪತ್ತೆಹಚ್ಚಿದ ಉಪಗ್ರಹಗಳು

Update: 2018-08-19 17:41 GMT

ಪ್ಯಾರಿಸ್,ಆ.19: ಸದ್ಯ ವಿನಾಶದ ಅಂಚಿನಲ್ಲಿರುವ ಅಪರೂಪದ ಬಾಸ್ಕಿನ್ ಶಾರ್ಕ್‌ಗಳನ್ನು ಪಶ್ಚಿಮ ಫ್ರಾನ್ಸ್‌ನ ಸಾಗರದಲ್ಲಿ ಉಪಗ್ರಹಗಳ ಸಹಾಯದಿಂದ ಪತ್ತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

35 ಅಡಿವರೆಗೆ ಬೆಳೆಯುವ ಈ ಶಾರ್ಕ್‌ಗಳು ಗಾತ್ರದಲ್ಲಿ ಜಗತ್ತಿನ ಎರಡನೇ ದೊಡ್ಡ ಮೀನುಗಳಾಗಿವೆ. ಆದರೆ ಇಂದಿಗೂ ಬಾಸ್ಕಿನ್ ಶಾರ್ಕ್‌ಗಳು ವಿಜ್ಞಾನಿಗಳ ಪಾಲಿಗೆ ಕೌತುಕದ ವಿಷಯವಾಗಿದೆ. ಬಾಸ್ಕಿನ್ ಶಾರ್ಕ್‌ನ ಕಿವಿರಿನಿಂದ ತಯಾರಿಸುವ ಸೂಪ್‌ಗೆ ಚೀನಾದಲ್ಲಿ ಬಹಳ ಬೇಡಿಕೆಯಿದೆ. ಜೊತೆಗೆ ಈ ಮೀನಿನ ತೈಲಾಂಶಯುಕ್ತ ಜಠರ ಹಾಗೂ ಮಾಂಸಕ್ಕೂ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಬಾಸ್ಕಿನ್ ಶಾರ್ಕ್‌ಗಳನ್ನು ಅವ್ಯಾಹತವಾಗಿ ಬೇಟೆಯಾಡಲಾಗುತ್ತದೆ. ಈ ಕಾರಣದಿಂದ 20ನೇ ಶತಮಾನದಿಂದೀಚೆಗೆ ಈ ಜಾತಿಯ ಮೀನುಗಳ ಸಂಖ್ಯೆ ಗಣನೀಯವಾಗಿ ಕುಗ್ಗಿದ್ದು ಸದ್ಯ ವಿನಾಶದ ಅಂಚಿಗೆ ಬಂದು ತಲುಪಿದೆ ಎಂದು ವಿಜ್ಞಾನಿಗಳು ಖೇದ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News