ಪಾಕಿಸ್ತಾನದ ನೂತನ ಪ್ರಧಾನಿ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ: ಅಮೆರಿಕ

Update: 2018-08-19 17:59 GMT

ನ್ಯೂಯಾರ್ಕ್, ಆ.19: ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದನ್ನು ಸ್ವಾಗತಿಸಿರುವ ಅಮೆರಿಕ, ಪಾಕಿಸ್ತಾನ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸುವಂತೆ ಮಾಡಲು ನೂತನ ಸರಕಾರದ ಜೊತೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ ಎಂದು ತಿಳಿಸಿದೆ.

ಪಾಕಿಸ್ತಾನ ಅಮೆರಿಕಕ್ಕೆ ಸುಳ್ಳು ಮತ್ತು ವಂಚನೆಯನ್ನಲ್ಲದೆ ಮತ್ತೇನೂ ನೀಡಿಲ್ಲ. ಜೊತೆಗೆ ಉಗ್ರರಿಗೆ ಸ್ವರ್ಗವಾಗಿ ಪರಿಣಮಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡುವ ಮೂಲಕ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಧದಲ್ಲಿ ಬಿರುಕು ಮೂಡಿತ್ತು. ಪಾಕಿಸ್ತಾನಕ್ಕೆ ನೀಡಲಾಗುವ ವಾರ್ಷಿಕ ಒಂದು ಬಿಲಿಯನ್ ಡಾಲರ್ ಭದ್ರತಾ ನೆರವನ್ನು 150 ಮಿಲಿಯನ್ ಡಾಲರ್‌ಗೆ ಇಳಿಸುವ ಮಸೂದೆಯನ್ನು ಯುಎಸ್ ಕಾಂಗ್ರೆಸ್ ಅಂಗೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News