ಇಂಡೋನೇಶಿಯದಲ್ಲಿ ಮತ್ತೆ ಕಂಪಿಸಿದ ಭೂಮಿ

Update: 2018-08-19 18:00 GMT

ಮಟರಮ್, ಆ.19: ತಿಂಗಳ ಆರಂಭದಲ್ಲಿ ಪ್ರಬಲ ಭೂಕಂಪಕ್ಕೆ ತುತ್ತಾಗಿ 430ಕ್ಕೂ ಅಧಿಕ ಜನರು ಸಾವನ್ನಪ್ಪಿದ ಇಂಡೋನೇಶಿಯದ ಲೊಂಬೊಕ್‌ನಲ್ಲಿ ರವಿವಾರ ಮತ್ತೆ ಭೂಮಿ ಕಂಪಿಸಿದೆ ಎಂದು ಯುಎಸ್ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ.

ರವಿವಾರ ಸಂಭವಿಸಿದ 6.3 ತೀವ್ರತೆಯ ಭೂಕಂಪದ ಕೇಂದ್ರಬಿಂದು ರಿಂಜನಿ ಶಿಖರದ ತಳದಲ್ಲಿರುವ ಲೊಂಬೊಕ್ ದ್ವೀಪದಲ್ಲಿತ್ತು ಎಂದು ಇಲಾಕೆ ತಿಳಿಸಿದೆ. ಸದ್ಯ ಸುನಾಮಿ ಎಚ್ಚರಿಕೆ ಹೊರಡಿಸಲಾಗಿಲ್ಲ ಮತ್ತು ಯಾವುದೇ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿರುವ ಲೊಂಬೊಕ್ ದ್ವೀಪ ಕಳೆದ ಜುಲೈ 29ರಿಂದ ಸಂಭವಿಸಿದ ಭೂಕಂಪಗಳು ಪ್ರಶ್ಚಾತ್ ಕಂಪನಗಳ ಸರಣಿಯಿಂದ ತತ್ತರಿಸಿ ಹೋಗಿದೆ.

ರವಿವಾರ ಸಂಭವಿಸಿದ ಭೂಕಂಪ ಈಗಾಗಲೇ ಭಯಭೀತರಾಗಿರುವ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಜನರು ತಮ್ಮ ಮನೆಗಳ ಒಳಗೆ ಮಲಗಲು ಭಯಪಡುತ್ತಿದ್ದು ಬಯಲು ಪ್ರದೇಶಗಳನ್ನೇ ನೆಚ್ಚಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News