ಆಳ್ವಾಸ್: ಏಚ್‌ಆರ್ ಕ್ಲಬ್ 2018-19 ವರ್ಷದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನೆ

Update: 2018-08-20 13:27 GMT

ಮೂಡುಬಿದಿರೆ, ಆ. 20: ಯಶಸ್ಸಿನ ಜೀವನಕ್ಕೆ ಯೋಜನೆಗಳೆೆ ಅಡಿಪಾಯ. ಜೀವನ ಎಂಬುವುದು ನಮಗೆ ಸಿಕ್ಕ ಅದ್ಭುತ ಕೊಡುಗೆ. ಅದನ್ನು ಉತ್ತಮವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇರುತ್ತದೆ ಎಂದು ಆಳ್ವಾಸ್ ಎಂಬಿಎ ಕಾಲೇಜಿನ ಉಪನ್ಯಾಸಕಿ ಡಾ. ಕ್ಲಾರೆಟ್ ಮೆನ್ಡೋನ್ಸ ತಿಳಿಸಿದರು.

ಅವರು ಸೋಮವಾರ ಆಳ್ವಾಸ್ ಕಾಲೇಜಿನ ಎಮ್.ಕಾಮ್ ಎಚ್‌ಆರ್‌ಡಿ ವಿಭಾಗದ ವತಿಯಿಂದ ಏಚ್‌ಆರ್ ಕ್ಲಬ್ 2018-19 ವರ್ಷದ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸನ್ನು ಸಾದಿಸಿದ್ದಾರೆ. ಆದರೆ ವೈಯಕ್ತಿಕ ಜೀವನ ಮತ್ತು ವ್ಯವಹಾರಿಕ ಬದುಕು ಎರಡರ ಮಧ್ಯೆ ಸಮತೋಲನ ಸಾಧಿಸುವಲ್ಲಿ ಮಹಿಳೆಯರಿಗೆ ಸವಾಲು ಎದುರಾಗುತ್ತದೆ. ಮಿಕ್ಕೆಲ್ಲಾ ಹುದ್ದೆಗಳಿಗಿಂತ ತಾಯಿ ಹುದ್ದೆಯೇ ಶ್ರೇಷ್ಠ ಆದರೂ, ವ್ಯವಹಾರಿಕ ಜೀವನವನ್ನು ಮಹಿಳೆಯರು ನಿರ್ಲಕ್ಷಿಸಬಾರದು ಎಂದು ತಿಳಿಸಿದರು. ಎಚ್‌ಆರ್ ಆಗ ಬಯಸುವ ವ್ಯಕ್ತಿ ಮೊದಲಿಗೆ ಸಹನೆ, ಕಷ್ಟಕರ ಸಂದರ್ಭವನ್ನು ನಿರ್ವಹಿಸಸುವ ಗುಣವನ್ನು ರೂಡಿಸಿಕೊಳ್ಳ ಬೇಕು, ಕಡಿಮೆ ಸಮಯದಲ್ಲಿ ಯಶಸ್ಸುಗಳಿಸುವುದು ಸುಲಭವಲ್ಲ, ಅದಕ್ಕೆ ಧ್ಯೇಯದ ಜೊತೆಗೆ ಶ್ರದ್ಧೆಯೂ ಮುಖ್ಯ ಎಂದರು.

ಸಂಗೀತಾ ಕಾರ್ಯಕ್ರಮ ನಿರೂಪಿಸಿದರು. ವಿಭಾಗದ ಮುಖ್ಯಸ್ಥೆ ಶಾಜಿಯಾ ಸಯ್ಯದ್, ಕ್ಲಬ್‌ನ ವಿದ್ಯಾರ್ಥಿ ಸಂಯೋಜಕರಾದ ಪ್ರಜ್ಞಾ , ಅಭಿಜಿತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News