ಬೃಹತ್ ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆ

Update: 2018-08-20 15:40 GMT

ಪಕುರ್, ಆ.20: ಜಾರ್ಖಂಡ್‌ನ ಪಕುರ್ ಜಿಲ್ಲೆಯಲ್ಲಿರುವ ಗ್ರಾಮದಲ್ಲಿ ಪೊಲೀಸರು ನಡೆಸಿದ ದಾಳಿಯ ವೇಳೆ ಬೃಹತ್ ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಹರಪುರ್ ಗ್ರಾಮದಲ್ಲಿರುವ ಭಗತ್ ಮುರ್ಮು ಎಂಬಾತನ ಮನೆಯ ಮೇಲೆ ಪೊಲೀಸರು ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಈ ಸ್ಫೋಟಕಗಳು ಪತ್ತೆಯಾಗಿರುವುದಾಗಿ ವರದಿ ಮಾಡಲಾಗಿದೆ.

ದಾಳಿಯ ವೇಳೆ, 10,000 ಡಿಟೊನೇಟರ್‌ಗಳು, 5,000 ಪವರ್ ಜೆಲ್‌ಗಳು ಮತ್ತು 65 ಚೀಲ ಅಮೀನಿಯಂ ನೈಟ್ರೇಟ್ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಆದರೆ ಭಗತ್ ಮುರ್ಮು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News