ಜೋಡುಪಾಲ ಪ್ರಕೃತಿ ದುರಂತ ಸ್ಥಳಕ್ಕೆ ರಮಾನಾಥ ರೈ ಭೇಟಿ

Update: 2018-08-20 16:36 GMT

ಸುಳ್ಯ, ಆ. 20: ಜೋಡುಪಾಲ ಪ್ರಕೃತಿ ದುರಂತ ಸ್ಥಳಕ್ಕೆ ಮಾಜಿ ಅರಣ್ಯ ಸಚಿವ ರಮಾನಾಥ ರೈ ಭೇಟಿ ನೀಡಿದ್ದಾರೆ.

ಜೋಡುಪಾಲ ಪ್ರಕೃತಿ ದುರಂತ ಸ್ಥಳದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಗುಡ್ಡ ಕುಸಿತ ಮುಂದುವರಿದ ಕಾರಣ ರಕ್ಷಣಾಪಡೆಗಳ ತಾತ್ಕಾಲಿಕ ಸ್ಥಗಿತಗೊಳಿಸಿದ್ದು, ಎನ್‌ಆರ್‌ಎಫ್ ಪಡೆ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಜೋಡುಪಾಲದಲ್ಲಿ ಗುಡ್ಡ ಜರಿದು ದುರಂತ ಸಂಭವಿಸಿದ ಸ್ಥಳಕ್ಕೆ ರಾಜ್ಯದ ಮಾಜಿ ಅರಣ್ಯ ಸಚಿವ ರಮಾನಾಥ ರೈ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್‌ನ ಸುಳ್ಯ ತಾಲೂಕು ಉಸ್ತುವಾರಿ ಮಹಮ್ಮದ್, ಮುಖಂಡರಾದ ವರ್ಗಿಸ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ಮೊದಲಾದವರಿದ್ದರು.

ನಿರಾಶ್ರಿತ ಶಿಬಿರಗಳಿಗೆ ಭೇಟಿ:ಪ್ರಕೃತಿ ದುರಂತದಿಂದ ಸಂತ್ರಸ್ತರಾಗಿಕೊಡಗು ಸಂಪಾಜೆ, ಕಲ್ಲುಗುಂಡಿ ಮತ್ತು ಅರಂತೋಡು ನಿರಾಶ್ರಿತ ಶಿಬಿರಗಳಲ್ಲಿ ಕಳೆಯುತ್ತಿರುವ ಜನರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News