ಖಾಸಗಿಯವರಿಂದ ದೇಣಿಗೆ ಸಂಗ್ರಹ ವಿರುದ್ಧ ಉಡುಪಿ ಜಿಲ್ಲಾಡಳಿತದಿಂದ ಎಚ್ಚರಿಕೆ

Update: 2018-08-20 17:22 GMT

ಉಡುಪಿ, ಆ.20: ಕೆಲವೊಂದು ಸಂಘ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಸಂತ್ರಸ್ತರಿಗೆ ನೀಡುವ ಹೆಸರಿನಲ್ಲಿ ಹಣ ಹಾಗೂ ದೇಣಿಗೆಗಳನ್ನು ಸಂಗ್ರಹಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಈ ರೀತಿ ಕೊಡಗು ಜಿಲ್ಲೆಯ ನೊಂದ ಸಂತ್ರಸ್ತರಿಗೆ ಸಹಾಯ ಮಾಡಲು, ಹಣ ನೀಡಲು ಬಯಸುವ ಸಂಘ ಸಂಸ್ಥೆಗಳು ಅಥವಾ ಸಾರ್ವಜನಿಕ ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿ ಪ್ರಾಕೃತಿಕ ವಿಕೋಪ-2018ಕ್ಕೆ ಸಂಬಂಧಿಸಿ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ವಿಧಾನಸೌಧ ಖಾತೆ ನಂಬ್ರ: 37887098605 (ಐಎಫ್‌ಎಸ್‌ಸಿ ಕೋಡ್ ಎಸ್‌ಬಿಐಎನ್0040277), (ಮೈಕ್ರೋ ನಂ.56002419)ಕ್ಕೆ ಮಾತ್ರಜಮಾ ಮಾಡುವಂತೆ ಸೂಚಿಸಲಾಗಿದೆ.

ಯಾವುದೇ ಸಂಘಸಂಸ್ಥೆಗಳ ಅಥವಾ ಖಾಸಗಿ ವ್ಯಕ್ತಿಗಳ ಮೂಲಕ ದೇಣಿಗೆ ಯನ್ನು ನೀಡಿದಲ್ಲಿ ಅದು ಅವರದೇ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ. ಮತ್ತು ಈ ಬಗ್ಗೆ ಜಿಲ್ಲಾಡಳಿತ ಜವಾಬ್ದಾರರಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News