ಉಡುಪಿ: ನವೀಕೃತ ಭಿಮಾ ಜ್ಯುವೆಲ್ಲರ್ಸ್‌ ಉದ್ಘಾಟನೆ

Update: 2018-08-20 17:26 GMT

ಉಡುಪಿ, ಆ.20: ಉಡುಪಿಯಲ್ಲಿ ಹೆಸರಾಂತ ಭಿಮಾ ಜುವೆಲ್ಲರ್ಸ್‌ನ ನವೀಕೃತ, ಆಕರ್ಷಕ ಮಳಿಗೆಯನ್ನು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಜಯರಾಮ ಭಟ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯರಾಮ ಭಟ್, ಭಿಮಾ ಜುವೆಲ್ಲರ್ಸ್‌ ಕರ್ನಾಟಕ ಬ್ಯಾಂಕಿನ ಗ್ರಾಹಕರಾಗಿದ್ದು, ಅದು ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಅದು ವಿಶ್ವಾಸಕ್ಕೆ, ಜನರಿಗೆ ಪರಿಶುದ್ಧವಾದ, ವೈವಿಧ್ಯಮಯವಾದ ಚಿನ್ನದ ಆಭರಣ ನೀಡುವುದಕ್ಕೆ ಹೆಸರಾಗಿದೆ ಎಂದರು.

ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಭಿಮಾ ಜುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಕೃಷ್ಣನ್, ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದರು.

ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ವಿಷ್ಣು ಶರಣ್ ಕೆ.ಭಟ್, 94 ವರ್ಷಗಳ ಹಿಂದೆ ಉಡುಪಿಗೆ ಸಮೀಪದ ಉದ್ಯಾವರದಿಂದ ಕೇರಳಕ್ಕೆ ವಲಸೆ ಹೋದ ಭೀಮ ಭಟ್ಟರಿಂದ ಅಲೆಪ್ಪಿಯಲ್ಲಿ ಪ್ರಾರಂಭಗೊಂಡ ಭಿಮ ಜುವೆಲ್ಲರ್ಸ್‌, ಇಂದು ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಒಟ್ಟು 40 ಶೋರೂಮ್‌ಗಳನ್ನು ಹೊಂದಿದೆ ಎಂದರು.

ಸಮಾಜ ಸೇವೆಗಾಗಿ ಪ್ರಾರಂಭಿಸಿರುವ ಭಿಮ ಫೌಂಡೇಷನ್ ಮೂಲಕ ಕೇರಳದ ನೆರೆಪೀಡಿತ ಜನರಿಗಾಗಿ ಸಂಗ್ರಹಿಸಿರುವ ನೆರೆ ಪರಿಹಾರದ ವಸ್ತುಗಳನ್ನು ಎರಡು ಲಾರಿಗಳಲ್ಲಿ ಈಗಾಗಲೇ ಕಳುಹಿಸಲಾಗಿದೆ.ಅದೇ ರೀತಿ ರಾಜ್ಯದಲ್ಲಿ ಕೊಡಗಿನಲ್ಲಿ ನೆರೆ ಸಂತ್ರಸ್ತರಿಗಾಗಿ ವಸ್ತುಗಳನ್ನು ಸಂಗ್ರಹಿಸಿ ಶೀಘ್ರವೇ ವಿತರಿಸಲಾಗುವುದು ಎಂದು ವಿಷ್ಣು ಭಟ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News