ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ: ಹರೀಶ್ ಕುಮಾರ್

Update: 2018-08-20 17:31 GMT

ಬೆಳ್ತಂಗಡಿ, ಆ. 20: ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವಂತೆ ಕಾಣಿಸುತ್ತಿದ್ದು, ಇದರ ವಿರುದ್ಧ ಇರುವ ಜನಾಕ್ರೋಶವನ್ನು ರಾಜ್ಯ ಸರಕಾರದತ್ತ ತಿರುಗಿಸಲು ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ನೀಡಿಲ್ಲವೆಂದು ಬಿಜೆಪಿಯ ಶಾಸಕರು ಹಾಗೂ ಮುಖಂಡರು ಆರೋಪ ಮಾಡುತ್ತಾ ಜನರನ್ನು ವಂಚಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಅವರು, ಸೋಮವಾರ ಬೆಳ್ತಂಗಡಿಯಲ್ಲಿ ಕರೆದಿದ್ದ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯದ ಹಿಂದಿನ ರಾಜ್ಯ ಸರಕಾರ ಈ ವರದಿಗೆ ಮೂರು ಬಾರಿ ಆಕ್ಷೇಪಣೆಯನ್ನು ಸಲ್ಲಿಸಿದೆ. ಈಗಲೂ ಆಕ್ಷೇಪಣೆಯನ್ನು ಸಲ್ಲಿಸಿದೆ. ಇದು ಯಾವುದನ್ನು ತಿಳಿದುಕೊಳ್ಳದೆ ಶಾಸಕ ಹರೀಶ ಪೂಂಜ ಸುಳ್ಳು ಆರೋಪ ಮಡುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಜ್ಯಾರಿ ಅಥವಾ ತಿರಸ್ಕರ ಮಾಡುವುದು ಕೇಂದ್ರ ಸರಕಾರ ಮಾಡಬೇಕಾದ ಕೆಲಸ. ಜನರ ಬಗ್ಗೆ ಕಾಳಜಿ ಕೇವಲ ರಾಜ್ಯ ಸರಕಾಕ್ಕೆ ಮಾತ್ರವಲ್ಲ, ಕೇಂದ್ರ ಸರಕಾರಕ್ಕೂ ಇದೆ. ಜನ ವಿರೋಧಿಯಾದ ವರದಿಯನ್ನು ಕೇಂದ್ರ ಸರಕಾರವೇ ತಿರಸ್ಕರಿಸಲಿ ಎಂದರು.

ಗೋಷ್ಟಿಯಲ್ಲಿ ಬ್ಲಾಕ್ ಅಧ್ಯಕ್ಷ ರಾಜಶೇಖರ ಅಜ್ರಿ, ಯೂತ್ ಅಧ್ಯಕ್ಷ ಅಭಿನಂದನ್ ಹರೀಶ್, ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಮಾಜಿ ಸದಸ್ಯ ಶೈಲೇಶ್ ಕುಮಾರ್, ತಾಪಂ ಸದಸ್ಯ ಪ್ರವೀಣ ಗೌಡ, ಮುಖಂಡರುಗಳಾದ ಜಗದೀಶ ಡಿ., ಅನಿಲ್ ಪೈ, ಬಿ.ಕೆ. ವಸಂತ, ಪಳನಿಸ್ವಾಮಿ, ಯತೀಶ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News