ಅನ್ಸಾರಿಯ ಜುಮಾ ಮಸ್ಜಿದ್ ಕೃಷ್ಣಾಪುರ, ಬ್ಲಡ್ ಹೆಲ್ಪ್ ಕೇರ್ ವತಿಯಿಂದ ರಕ್ತದಾನ ಶಿಬಿರ

Update: 2018-08-20 18:02 GMT

ಮಂಗಳೂರು, ಆ. 20:  ಅನ್ಸಾರಿಯ ಜುಮಾ ಮಸ್ಜಿದ್ 9ನೆ ಬ್ಲಾಕ್ ಕೃಷ್ಣಾಪುರ ಹಾಗೂ ಬ್ಲಡ್ ಹೆಲ್ಪ್ ಕೇರ್  ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ  ಎ.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.

ಉಸ್ತಾದ್ ಅಬ್ದುಲ್ ಅಝೀಝ್ ಅಮಾನಿ ನಿಝಮಿ ಅವರ ದುವಾದೊಂದಿಗೆ ಕಾರ್ಯಕ್ರಮವು ಆರಂಭಗೊಂಡು, ಇಫ್ತಿಕಾರ್ ಕೃಷ್ಣಾಪುರ ಸ್ವಾಗತಿಸಿದರು.

ಎನ್ ವೈಎಸ್ ಸಿ ಮಾಜಿ ಅಧ್ಯಕ್ಷ, ಬ್ಲಡ್ ಹೆಲ್ಪ್ ಕೇರ್ ಇದರ ಖಜಾಂಜಿ ಸಫ್ವಾನ್ ಕಲಾಯಿ  ಮಾತನಾಡಿದರು. ಅನ್ಸಾರಿಯ ಜುಮಾ ಮಸೀದಿಯ ಅಧ್ಯಕ್ಷ ಮನ್ಸೂರ್, ಕಬೀರ್ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿ ಶುಭ ಹಾರೈಸಿದರು.

  ಅತಿಥಿಗಳಿಗೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ವತಿಯಿಂದ ನೆನಪಿನ ಫಲಕ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭ ಸುಮಾರು 85 ಯೂನಿಟ್ ರಕ್ತ ಸಂಗ್ರಹಿಸಲಾಯಿತು.  ವಿಶೇಷವಾಗಿ 6 ಮಹಿಳೆಯರು ರಕ್ತ ದಾನ ಮಾಡುವ ಮೂಲಕ ಇತರ ಸ್ತ್ರೀಯರಿಗೆ ಪ್ರೇರಣೆಯಾದರು. ಪ್ರದೀಪ್ ಕೃಷ್ಣಾಪುರ, ಮೋಹನ್ ಕುಮಾರ್ ಬಿಹಾರ್  ರಕ್ತದಾನ ಮಾಡಿ ಸೌಹಾರ್ದತೆ ಮೆರೆದರು ಎಂದು ಸಂಘಟಕರು ಪ್ರಶಂಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News