×
Ad

ಟ್ಯಾಲೆಂಟ್‍ನಲ್ಲಿ ಬಕ್ರೀದ್ ಕಿಟ್ ವಿತರಣೆಗೆ ಚಾಲನೆ

Update: 2018-08-21 18:16 IST

ಮಂಗಳೂರು: ಆ 21, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ಬಕ್ರೀದ್ ಕಿಟ್ ವಿತರಣೆಗೆ ಸಂಸ್ಥೆಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಕ್ಷ್‍ಪರ್ಟೈಸ್ ಗ್ರೂಪ್‍ನ ಆಡಳಿತ ನಿರ್ದೇಶಕ ಶೇಖ್ ಮೊಯ್ದಿನ್ ಕರ್ನಿರೆ ಮಾತನಾಡುತ್ತಾ, “ಹಬ್ಬವನ್ನು ಆಚರಿಸಲು ಸಾಧ್ಯವಾಗದ ಕುಟುಂಬಗಳನ್ನು ಹುಡುಕಿ ಅವರಿಗೆ ಸೂಕ್ತ ಸಹಾಯವನ್ನು ತಲುಪಿಸುವುದು ಪುಣ್ಯಕಾರ್ಯ. ಇದೇ ಹಬ್ಬದ ನಿಜವಾದ ಸಂದೇಶ. ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಟ್ಯಾಲೆಂಟ್‍ನ ಸೇವೆ ಶ್ಲಾಘನೀಯ” ಎಂದರು.

ಕಾರ್ಯಕ್ರಮದಲ್ಲಿ ಹನೀಫ್ ಹಾಜಿ ಗೋಳ್ತಮಜಲು, ಅಧ್ಯಕ್ಷರು, ಹಿದಾಯ ಫೌಂಡೇಶನ್, ಬಿ.ಎಂ ಮುಮ್ತಾಝ್ ಅಲಿ, ಅಧ್ಯಕ್ಷರು, ಮಿಸ್ಬಾಹ್ ನಾಲೆಜ್ ಫೌಂಡೇಶನ್, ಮುಖ್ತಾರ್, ಆಡಳಿತ ನಿರ್ದೇಶಕರು, ರೀಮ್ ಟ್ರೇಡರ್ಸ್, ಡಾ. ಅಬ್ದುಲ್ ರವೂಫ್, ಆಡಳಿತ ನಿರ್ದೇಶಕರು, ಸುಲ್ತಾನ್ ಗೋಲ್ಡ್, ಎಂ.ಇ ಮೂಳೂರು, ಅಧ್ಯಕ್ಷರು, ಬ್ಯಾರೀಸ್ ಕಲ್ಚರಲ್ ಫೋರಮ್ ಸ್ಕಾಲರ್‍ಶಿಪ್ ಕಮಿಟಿ, ಡಾ. ಕಾಪು ಮುಹಮ್ಮದ್, ಬಿ.ಸಿಎಫ್ ಪ್ರಧಾನ ಕಾರ್ಯದರ್ಶಿ, ಅಬ್ದುಲ್ ಲತೀಫ್ ಮುಲ್ಕಿ, ಬಿ.ಸಿ.ಎಫ್ ಉಪಾಧ್ಯಕ್ಷ, ನೌಷಾದ್ ಹಾಜಿ, ಅಧ್ಯಕ್ಷರು, ನಂಡೆ ಪೆಂಙಳ್, ಮಜೀದ್ ಹಾಜಿ ಸಿತಾರ್, ನಿರ್ದೇಶಕರು, ಸುನ್ನೀ ಸಂದೇಶ, ಫತೇ ಮುಹಮ್ಮದ್ ಪುತ್ತಿಗೆ, ಆಡಳಿತ ನಿರ್ದೇಶಕರು, ಪುತ್ತಿಗೆ ಬಿಲ್ಡರ್ಸ್, ರೈಹಾನ ಸೈಯದ್, ರಫೀಕ್ ಕಲ್ಲಡ್ಕ, ಸಿದ್ದೀಖ್ ಸ್ನಾಕೀಸ್, ಸುಲೈಮಾನ್ ಶೇಖ್ ಬೆಳುವಾಯಿ, ವಿಶ್ವಾಸ್ ಎಸ್ಟೇಟ್ಸ್, ಉಮರ್ ಫಾರೂಖ್, ಉದ್ಯಮಿ ಮಂಗಳೂರು, ಝೊರಾನ್ ಸಯ್ಯದ್, ಖಾಲಿದ್ ತಣ್ಣೀರುಬಾವಿ, ಆಡಳಿತಾಧಿಕಾರಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ, ವಿಶ್ವಾಸ್  ಬಾವಾ ಬಿಲ್ಡರ್ಸ್‍ನ ಯೂಸುಫ್, ಹಮೀದ್, ಟಿ.ಆರ್.ಎಫ್‍ನ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಮಜೀದ್ ತುಂಬೆ, ನಕಾಶ್ ಬಾಂಬಿಲ, ಬಡಿಲ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು.

ಟಿ.ಆರ್.ಎಫ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಟಿ.ಆರ್.ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಡಿ ಅಬ್ದುಲ್ ಹಮೀದ್ ಕಣ್ಣೂರು ಧನ್ಯವಾದಗೈದರು. ಸಂಸ್ಥೆಯ ಸಲಹೆಗಾರ ರಫೀಕ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಪ್ರದೇಶಗಳ 340 ಅರ್ಹ ಕುಟುಂಬಗಳ ಮನೆ ಬಾಗಿಲಿಗೆ ಬಕ್ರೀದ್ ಕಿಟ್‍ಗಳನ್ನು ತಲುಪಿಸಲಾಯಿತು ಹಾಗೂ ಆಯ್ದ 50 ಮಹಿಳೆಯರಿಗೆ ರೇಷನ್ ಕಿಟ್ ಜೊತೆಗೆ ನಮಾಝ್ ಕಿಟ್‍ಗಳನ್ನು ವಿತರಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News