ಕೊಡಗಿನ ನೆರೆ ಸಂತ್ರಸ್ತರಿಗೆ ಅಮರನಾಥ ಶೆಟ್ಟಿ ನೇತೃತ್ವದಲ್ಲಿ 54 ಕ್ವಿಂಟಾಲ್ ಅಕ್ಕಿ ಕೊಡುಗೆ
Update: 2018-08-21 18:31 IST
ಮೂಡುಬಿದಿರೆ, ಆ. 21: ಕೊಡಗಿನ ನೆರೆ ಸಂತ್ರಸ್ತರಿಗೆ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಮೂಡುಬಿದಿರೆ ಹಾಗೂ ಪರಿಸರದ ಗ್ರಾಮಗಳ ದಾನಿಗಳಿಂದ ಸಂಗ್ರಹಿಸಲಾಗಿರುವ 54 ಕ್ವಿಂಟಾಲ್ ಅಕ್ಕಿಯನ್ನು ಮಂಗಳವಾರ ಸಂಜೆ ತಹಶೀಲ್ದಾರ್ ರಶ್ಮಿ ಅವರಿಗೆ ಹಸ್ತಾಂತರಿಸುವ ಸರಳ ಕಾರ್ಯಕ್ರಮ ಮೂಡುಬಿದಿರೆ ಜೆಡಿಎಸ್ ಕಚೇರಿ ಎದುರು ನಡೆಯಿತು.
ತೋಡಾರು ದಿವಾಕರ ಶೆಟ್ಟಿ, ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಶೆಟ್ಟಿ ಪಾಲಡ್ಕ, ಪೃಥ್ವೀರಾಜ್ ಶೆಟ್ಟಿ, ಸುಕುಮಾರ ದೇವಾಡಿಗ, ಗ್ರಾ.ಪಂ. ಸದಸ್ಯ ಹರಿಪ್ರಸಾದ್ ಶೆಟ್ಟಿ ಮಿಜಾರುಗುತ್ತು, ವಿಶ್ವಾಸ್ ಅಲಂಗಾರು, ಭಾಸ್ಕರ ಆಚಾರ್ಯ, ಅಜಿತ್ ಕುಮಾರ್ ಕಿಶೋರ್ ಶೆಟ್ಟಿ, ಭಾನುಪ್ರಕಾಶ್ ರಾವ್ ಮೊದಲಾದವರಿದ್ದರು.