ಲೆಕ್ಕಪರಿಶೋಧಕರ ಸಂಸ್ಥೆಯಿಂದ ಕಾರ್ಯಾಗಾರ
Update: 2018-08-21 19:32 IST
ಉಡುಪಿ, ಆ.21: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯು ಸಿಪಿಇ ಸಮಿತಿ ಐಸಿಎಐ ಸಹಯೋಗದೊಂದಿಗೆ ಖಾಸಗಿ ಸೀಮಿತ ಕಂಪೆನಿಗಳು ಮತ್ತು ಕಾರೊ ಆಡಿಟ್‌ಗಳ ಕುರಿತ ಒಂದು ದಿನದ ಕಾರ್ಯ ಗಾರವನ್ನು ಕುಂಜಿಬೆಟ್ಟುವಿನಲ್ಲಿರುವ ಉಡುಪಿ ಶಾಖೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಗಾರವನ್ನು ಚೆನ್ನೈಯ ಸಿಎ ವೇದವಲ್ಲಿ ಶ್ರೀರಾಮ ಮತ್ತು ಸೆಂಟ್ರಲ್ ಕೌನ್ಸಿಲ್ ಸದಸ್ಯೆ ಸಿಎ ಶ್ರೀಪ್ರಿಯಾ ನಡೆಸಿಕೊಟ್ಟರು. ಲೆಕ್ಕ ಪರಿಶೋಧಕರ ಸಂಸ್ಥೆಯ ಅಧ್ಯಕ್ಷ ಸಿಎ ಕೆ.ಸುರೇಂದ್ರ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ಮಹೀಂದ್ರ ಶೆಣೈ ಪಿ. ವಂದಿಸಿದರು.