×
Ad

ಅಟಲ್ ಬಿಹಾರಿ ವಾಜಪೇಯಿಗೆ ಹಸಿರು ಶ್ರದ್ಧಾಂಜಲಿ

Update: 2018-08-21 19:34 IST

ಉಡುಪಿ, ಅ.21:ಉಡುಪಿಯ ಸಾಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಗಲಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಂಬಲಪಾಡಿ ಬೀಡುಮಾರ್ಗದಲ್ಲಿ ರವಿವಾರ ಹಸಿರು ಶೃದ್ಧಾಂಜಲಿ ಸಲ್ಲಿಸಲಾಯಿತು.

ಅಟಲ್ ಜೀ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಅವರ ಶಾಶ್ವತ ಸ್ಮರಣಾರ್ಥ ಗಿಡವನ್ನು ನೆಡಲಾಯಿತು. ನಿವೃತ್ತ ಶಿಕ್ಷಕರಾದ ಆನಂದ ಗಾಣಿಗ ಅಟಲ್ ಜೀ ಅವರ ಜೀವನ ಪಯಣದ ಹಾದಿಯನ್ನು ನೆನಪಿಸಿ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಪ್ರೇಮಾನಂದ ಕಲ್ಮಾಡಿ, ತಾರಾನಾಥ್ ಮೇಸ್ತ ಶಿರೂರು, ವಿನಯಚಂದ್ರ ಸಾಸ್ತಾನ, ಕೃಷ್ಣ ಅಂಬಲಪಾಡಿ, ಪತ್ರಕರ್ತ ಸಂತೋಷ್ ಸರಳಬೆಟ್ಟು, ಹಾಗೂ ಶಶಿಕಾಂತ್ ಉಪಾಧ್ಯಾಯ, ಸುಮಂತ್, ಹರೀಶ್ ಉಪಸ್ಥಿತರಿದ್ದರು. ವಿಶು ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News