ಡಿ.9: ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರ

Update: 2018-08-21 14:29 GMT

ಮಂಗಳೂರು, ಆ.21: ಮಾಂಡ್‌ಸೊಭಾಣ್ ಕೊಂಕಣಿ ಸಾಂಸ್ಕೃತಿಕ ಸಂಘಟನೆಯಿಂದ ಪ್ರಥಮ ಜಾಗತಿಕ ಕೊಂಕಣಿ ಚಲನಚಿತ್ರ ಪುರಸ್ಕಾರವನ್ನು ಆಯೋಜಿಸಲಾಗುತ್ತಿದೆ. ಪುರಸ್ಕಾರ ಪ್ರದಾನ ಸಮಾರಂಭ ಡಿ.9ರಂದು ಮಂಗಳೂರು ಕಲಾಂಗಣದಲ್ಲಿ ನಡೆಯಲಿದೆ ಎಂದು ಗುರಿಕಾರ ಎರಿಕ್ ಒಝೇರಿಯೊ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆಯು ಹಲವು ವರ್ಷಗಳಿಂದ ಸಂಗೀತ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡುತ್ತಿತ್ತು ಈ ಸಾಲಿನಿಂದ ದ್ವೈವಾರ್ಷಿಕವಾಗಿ ಚಲನಚಿತ್ರ ಕ್ಷೇತ್ರ ಮತ್ತು ಸಿನೆಮಾ ಕಲಾವಿದರನ್ನು ಗೌರವಿಸಲು ಚಲನಚಿತ್ರ ಪುರಸ್ಕಾರವನ್ನು ಆಯೋಜಿಸಲಾಗುತ್ತಿದೆ ಎಂದರು.

ಶ್ರೇಷ್ಠ ಚಲನಚಿತ್ರ, ಶ್ರೇಷ್ಠ ನಿರ್ದೇಶಕ, ಶ್ರೇಷ್ಠ ನಟ, ಶ್ರೇಷ್ಠ ನಟಿ, ಶ್ರೇಷ್ಠ ಪೋಷಕ ನಟ, ಶ್ರೇಷ್ಠ ಪೋಷಕ ನಟಿ, ಶ್ರೇಷ್ಠ ಚಿತ್ರಕತೆ ಸಂಭಾಷಣೆ, ಶ್ರೇಷ್ಠ ಸಂಗೀತ ಹಾಗೂ ಶ್ರೇಷ್ಠ ಕಿರುಚಿತ್ರಗಳೆಂಬ ಒಂಬತ್ತು ವಿಭಾಗದಲ್ಲಿ ಪುರಸ್ಕಾರಗಳನ್ನು ನೀಡಲಾಗುವುದು ಪ್ರತಿ ವಿಭಾಗದಲ್ಲಿ 25 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ ಎಂದರು.

ಅರ್ಜಿ ಹಾಗೂ ಚಿತ್ರದ ಪ್ರಿಂಟ್ ತಲುಪಲು ಸೆ.30 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆಗಳಿಗೆ ಮಾಂಡ್ ಸೊಭಾಣ್ ವೆಬ್‌ಸೈಟ್ www.manddsobhan.org ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ಸಂದರ್ಭ ಮಾಂಡ್‌ಸೊಭಾಣ್ ಅರ್ದಯಕ್ಷ ಲೂವಿಸ್ ಜೆ.ಪಿಂಟೊ, ಸಂಘಟಕ ಅಲ್ವಾರಿಸ್, ಕೋಶಾಧಿಕಾರಿ ಅರುಣ್ ರಾಜ್ ರೋಡ್ರಿಗಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ನವೀನ್ ಲೋಬೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News