×
Ad

ನಗರ ಸ್ಥಳೀಯ ಸಂಸ್ಥೆ ಚುನಾವಣೆ:ಒಟ್ಟು 28 ನಾಮಪತ್ರಗಳು ತಿರಸ್ಕೃತ

Update: 2018-08-21 20:04 IST

ಉಡುಪಿ, ಆ.21: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ಆ.20ರಂದು ನಡೆದ ನಾಮಪತ್ರ ಪರಿಶೀಲನೆ ನಂತರ ಉಡುಪಿ ನಗರಸಬೆಯ 35 ವಾರ್ಡ್‌ಗಳಿಗೆ ಸಲ್ಲಿಸಿದ್ದ 98 ನಾಮಪತ್ರಗಳಲ್ಲಿ 3 ನಾಮಪತ್ರಗಳು ತಿರಸ್ಕೃತವಾಗಿದ್ದು, 95 ಕ್ರಮಬದ್ದವಾಗಿವೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ವಾರ್ಡ್‌ಗಳಿಗೆ ಸಲ್ಲಿಸಲಾಗಿದ್ದ 63 ನಾಮಪತ್ರಗಳಲ್ಲಿ 16 ನಾಮಪತ್ರ ತಿರಸ್ಕೃತವಾಗಿದ್ದು, 47 ಕ್ರಮಬದ್ದವಾಗಿವೆ.
ಕುಂದಾಪುರ ಪುರಸಭೆಯ 23 ವಾರ್ಡ್‌ಗಳಿಗೆ ಸಲ್ಲಿಸಿದ್ದ 81 ನಾಮಪತ್ರಗಳಲ್ಲಿ 5 ನಾಮಪತ್ರಗಳು ತಿರಸ್ಕೃತವಾಗಿದ್ದು, 75 ಕ್ರಮಬದ್ದವಾಗಿವೆ.

ಕಾರ್ಕಳ ಪುರಸಭೆಯ 23 ವಾರ್ಡ್‌ಗಳಿಗೆ ಸಲ್ಲಿಸಿದ್ದ 59 ನಾಮಪತ್ರಗಳಲ್ಲಿ 4 ನಾಮಪತ್ರ ತಿರಸ್ಕೃತವಾಗಿದ್ದು, 57 ಕ್ರಮಬದ್ದವಾಗಿವೆ.
ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಆ.23 ಕೊನೆಯ ದಿನವಾಗಿದ್ದು, ಅದೇ ದಿನ ಸಂಜೆಯ ವೇಳೆ ಸ್ಪರ್ಧಾಣದ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News