×
Ad

ಮೀನುಗಾರಿಕಾ ದೋಣಿ ಮಾಲಕರಿಗೆ ಸೂಚನೆ

Update: 2018-08-21 20:06 IST

ಉಡುಪಿ, ಆ.21: ಜಿಲ್ಲೆಯ ಮೀನುಗಾರರು ರಾಷ್ಟ್ರೀಯ ಭದ್ರತೆ ಮತ್ತು ಮೀನುಗಾರರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕೆಳಗಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಆಳ ಸಮುದ್ರ ದೋಣಿಗಳಲ್ಲಿ ಕಡ್ಡಾಯವಾಗಿ ಟ್ರಾನ್ಸ್‌ಪಾಂಡರ್/ ಎಐಎಸ್ ಅಳವಡಿಸಿ ಎಂಎಂಡಿ(Marine Mercantile Department) ನಲ್ಲಿ ನೊಂದಾವಣೆ ಮಾಡಿಸಬೇಕು. ಇದರಿಂದ ಪ್ರಕೃತಿ ವಿಕೋಪ ಸಮಯದಲ್ಲಿ ದೋಣಿ ಇರುವ ಸ್ಥಳ ಮತ್ತು ಚಲನವಲನವನ್ನು ತಿಳಿಯಲು ಸಾಧ್ಯವಾಗುವುದು.
ಬಯೋಮೆಟ್ರಿಕ್ ಕಾರ್ಡ್ ಹೊಂದಿರದ ಎಲ್ಲಾ ಸಮುದ್ರ ಮೀನುಗಾರಿಕೆ ಕಲಾಸಿಗಳು ಕಡ್ಡಾಯವಾಗಿ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕು. ದೋಣಿಯಲ್ಲಿ ನಿಗದಿತ ಪ್ರಮಾಣದಲ್ಲಿ ಲೈಪ್‌ಬಾಯ್ ಮತ್ತು ಲೈಪ್‌ಜಾಕೆಟ್ ಹೊಂದಿರಬೇಕು. ಬೋಟಿನ ಹೊರಹೋಗುವ ಮತ್ತು ಒಳ ಬರುವ ಮಾಹಿತಿ ಯನ್ನು ಡೀಸೆಲ್ ಬಂಕ್/ಇಲಾಖೆಗೆ ಸಲ್ಲಿಸಬೇಕು.

ಬಯೋಮೆಟ್ರಿಕ್ ಕಾರ್ಡ್ ಹೊಂದಿರದ ಎಲ್ಲಾ ಸಮುದ್ರ ಮೀನುಗಾರಿಕೆ ಕಲಾಸಿಗಳು ಕಡ್ಡಾಯವಾಗಿ ಇಲಾಖೆಯಿಂದ ಗುರುತಿನ ಪತ್ರ ಪಡೆಯಬೇಕು. ದೋಣಿಯಲ್ಲಿ ನಿಗದಿತ ಪ್ರಮಾಣದಲ್ಲಿ ಲೈಪ್‌ಬಾಯ್ ಮತ್ತು ಲೈಪ್‌ಜಾಕೆಟ್ ಹೊಂದಿರಬೇಕು. ಬೋಟಿನ ಹೊರಹೋಗುವ ಮತ್ತು ಒಳ ಬರುವ ಮಾಹಿತಿ ಯನ್ನು ಡೀಸಿಲ್ ಬಂಕ್/ಇಲಾಖೆಗೆ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಮೀನುಗಾರಿಕಾ ಇಲಾಖೆಯಿಂದ ಪಡೆಯುವಂತೆ ಹಾಗೂ ಸೂಚನೆಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸು ವಂತೆ ಮೀನುಗಾರಿಕಾ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News