ವಿದ್ಯಾರ್ಥಿಗಳಿಗೆ ಹೋಮ್ ವರ್ಕ್‌ನಿಂದ ಮುಕ್ತಿ ನೀಡಿ: ಶಾಲೆಗೆ ನಿರ್ದೇಶಿಸುವಂತೆ ಸಿಬಿಎಸ್‌ಇಗೆ ಹೈಕೋರ್ಟ್ ಆದೇಶ

Update: 2018-08-21 14:44 GMT

ಚೆನ್ನೈ, ಆ. 21: ಒಂದು ಹಾಗೂ ಎರಡನೇ ತರಗತಿಗೆ ‘ಹೋಮ್ ವರ್ಕ್ ಇಲ್ಲ’ ಎಂಬ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯ ಸೂಚನೆ ಅನುಸರಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಸಿಬಿಎಸ್‌ಇಗೆ ಆದೇಶಿಸಿದೆ.

ಎನ್‌ಸಿಇಆರ್‌ಟಿ ಸೂಚಿಸಿದ ಪಠ್ಯಕ್ರಮ ಹಾಗೂ ಪುಸ್ತಕಗಳನ್ನು ಅನುಸರಿಸುವಂತೆ ಸಿಬಿಎಸ್‌ಇಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯವಾದಿ ಎಂ. ಪುರುಷೋತ್ತಮನ್ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ಕಿರುಬಾಕರನ್ ಈ ಆದೇಶ ಜಾರಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News