ಪಡುಬಿದ್ರಿ: ಬ್ಲೂ ಪ್ಲ್ಯಾಗ್ ಬೀಚ್ ಯೋಜನೆ; ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆ

Update: 2018-08-21 14:51 GMT

ಪಡುಬಿದ್ರಿ,ಆ.21: ಪಡುಬಿದ್ರಿ ಎಂಡ್ ಪಾಯಿಂಟ್ ಬಳಿ ಅನುಷ್ಟಾನವಾಗಬೇಕಿದ್ದ ಬ್ಲೂ ಪ್ಲ್ಯಾಗ್ ಬೀಚ್ ಯೋಜನೆಯನ್ನು ನಡಿಪಟ್ಣ ಬೀಚ್ ಪ್ರದೇಶದಲ್ಲಿ ಸುಮಾರು 600 ಮೀಟರ್ ಪ್ರದೇಶದಲ್ಲಿ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. 

ಬ್ಲೂ ಪ್ಲ್ಯಾಗ್ ಬೀಚ್ ಯೋಜನೆ ಅನುಷ್ಠಾನ ಹಿನ್ನಲೆಯಲ್ಲಿ ಕೇಂದ್ರ ತಂಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ಥಳ ಪರಿಶೀಲನೆಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.

ಬ್ಲೂ ಪ್ಲ್ಯಾಗ್ ಬೀಚ್ ಯೋಜನೆ ಅನುಷ್ಠಾನಿಸುವ ಸಲುವಾಗಿ ಶಾಸಕರು, ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಬೀಚ್ ನಿರ್ವಹಣಾ ಸಮಿತಿ ಹಾಗೂ ಸ್ಥಳೀಯರು ಸೇರಿ ಆಗಸ್ಟ್ 26 ರಂದು ಪಡುಬಿದ್ರಿಯಲ್ಲಿ ಸಭೆ ನಡೆಯಲಿದೆ. 

ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗಲಿದ್ದು, ಸ್ಥಳೀಯರಿಗೆ ಯಾವುದೇ ತೊಂದೆರೆಯಿಲ್ಲದಂತೆ ನೈಸರ್ಗಿಕವಾಗಿ ಬೀಚ್ ಅಭಿವೃದ್ಧಿ ಮಾಡಲಾಗುತ್ತದೆ. ಜಿಲ್ಲಾಡಳಿತ, ಪ್ರವಾಸೋಧ್ಯಮ ಇಲಾಖೆ, ಸ್ಥಳೀಯರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳ್ಳಲಿದೆ. ಈ ಬೀಚ್‍ನ 2018ರ ವರ್ಷಾಂತ್ಯಕ್ಕೆ ಜಾಗತಿಕ ಪ್ರಧಾನ ಕಚೇರಿ ಡೆನ್ಮಾರ್ಕ್ ಸಹಯೋಗದೊಂದಿಗೆ ಬ್ಲೂಫ್ಲ್ಯಾಗ್ ಸರ್ಟಿಫಿಕೇಶನ್ ಗುಣಮಟ್ಟದ ಬೀಚ್ ಆಗಲಿದೆ ಎಂದರು.  

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್, ಸೊಸೈಟಿ ಫಾರ್ ಇಂಟರ್‍ಗ್ರೇಟಡ್‍ನ ಸಂಜಯ್ ಜಲ್ಲಾ, ಯೋಜನೆಯ ಗುತ್ತಿಗೆದಾರ ಕಂಪೆನಿ ಗುರ್‍ಗಾಂವ್‍ನ ಎ ಟು ಝಡ್ ಇನ್‍ಪ್ರಾ ಸರ್ವಿಸಸ್ ಲಿಮಿಟೆಡ್ ಸಂಸ್ಥೆಯ ಮನೋಜ್ ತಿವಾರಿ, ಅಲೋಕ್ ಕೆ.ಗುಪ್ತಾ, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಕರಾವಳಿ ಪ್ರವಾಸೋಧ್ಯಮ ಅಸೋಸಿಯೇಶನ್‍ನ ಮನೋಹರ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಸಾಲ್ಯಾನ್, ಗಣೇಶ್ ಕೋಟ್ಯಾನ್, ಸುಕುಮಾರ ಶ್ರೀಯಾನ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News