​ತುಳುನಾಟಕ ಕಲಾವಿದರ ಒಕ್ಕೂಟದಿಂದ ತೌಳವ ಪ್ರಶಸ್ತಿ ಪ್ರದಾನ

Update: 2018-08-21 14:53 GMT

ಮಂಗಳೂರು, ಆ.21: ತುಳು ನಾಟಕ ಕಲಾವಿದರ ಒಕ್ಕೂಟದ 15ನೇ ವಾರ್ಷಿಕ ಕಾರ್ಯಕ್ರಮವು ಇತ್ತೀಚೆಗೆ ನಗರದ ಪರಭವನದಲ್ಲಿ ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿಯ ಅಧ್ಯಕ್ಷತೆಯಲ್ಲಿ ಜರುಗಿತು. ಮೇಯರ್ ಭಾಸ್ಕರ್ ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಒಕ್ಕೂಟದ ಕ್ಷೇಮನಿಧಿ ಸಂಚಾಲಕ ಪ್ರದೀಪ್ ಆಳ್ವ ಕದ್ರಿ ಮಾತನಾಡಿದರು.

ತುಳು ನಾಟಕ ರಂಗದ ಕೀರ್ತಿ ವಿಶೇಷ ಕಲಾವಿದರ ‘ನೆಂಪು’ ಕಾರ್ಯಕ್ರಮದಲ್ಲಿ ನಾಟಕ ರಚನೆಕಾರ ಮಾಧವ ತಿಂಗಳಾಯರು, ಪ್ರಸಾದನ ಕಲಾವಿದ ದಿ. ಕೃಷ್ಣ ನಾಯಕ್ ಪಾಂಡೇಶ್ವರ, ಸಂಗೀತ ನಿರ್ದೇಶಕ ದಿ.ಎಸ್ ವಿಶ್ವನಾಥ ಸೂಟರ್‌ಪೇಟೆ, ನಾಟಕಕಾರ ದಿ. ರಾಘವ ಎಸ್. ಉಚ್ಚಿಲ್, ನಟ ದಿ. ಯಶವಂತ ಎನ್. ಸುವರ್ಣ ಬೊಕ್ಕಪಟ್ನ, ಸ್ತ್ರೀ ಪಾತ್ರಧಾರಿ ದಿ. ಯುವರಾಜ ಶೆಟ್ಟಿ ಅವರನ್ನು ಕುಟುಂಬ ಸದಸ್ಯರ ಮೂಲಕ ನೆನಪಿಸಲಯಿತು. ಅಲ್ಲದೆ 2017-18ನೇ ಸಾಲಿನ ತೌಳವ ಪ್ರಶಸ್ತಿಯನ್ನು ಹಿರಿಯ ನಟ, ನಾಟಕಕಾರ, ಎಂ. ವಿಶ್ವನಾಥ ಅವರಿಗೆ ನೀಡಿ ಪುರಸ್ಕರಿಸಲಾಯಿತು. ಅಲ್ಲದೆ ನಾಟಕಕಾರ ಕೃಷ್ಣಪ್ಪಉಪ್ಪೂರು, ನಟ, ನಿರ್ದೇಶಕ ಮಾಧವ ಜಪ್ಪುಪಟ್ನ, ನಟ ರಂಗಕರ್ಮಿ ಸುರೇಂದ್ರ ಬಾಬುಗುಡ್ಡೆ, ಸುಭಾಸ್ ಬಿ., ವೆಂಕಟೇಶ್, ಇಂದು ಎಸ್. ಮಂಗಳೂರು, ವಿನ್ನಿ ಫೆರ್ನಾಂಡೀಸ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ರಮಾನಾಥ ಹೆಗ್ಡೆ, ದಿನೇಶ್ ದೇವಾಡಿಗ, ಪುರುಷೋತ್ತಮ ಭಂಡಾರಿ, ಕಿರಣ್ ಜೋಗಿ,ದಿನಕರ ಸುವರ್ಣ, ಅಶೋಕ್ ಕುಮಾರ್ ಡಿ.ಕೆ. ಭಾಗವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಗೋಕುಲ್ ಕದ್ರಿ,ಎ. ಶಿವಾನಂದ ಕರ್ಕೇರ, ವಸಂತ ಜೆ. ಪೂಜಾರಿ, ತಾರಾನಾಥ್ ಶೆಟ್ಟಿ ಬೋಳಾರ್ ಉಪಸ್ಥಿತರಿದ್ದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಕುಮಾರ್ ಮಲ್ಲೂರ್ ಸ್ವಾಗತಿಸಿದರು. ಕೋಶಾಧಿಕಾರಿ ಮೋಹನ್ ಕೊಪ್ಪಲ್ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News