​ಕುರ್ಬಾನಿಗೆ ಕುದ್ರೋಳಿ ವಧಾಗೃಹ ಬಳಸಲು ಮನವಿ

Update: 2018-08-21 14:55 GMT

ಮಂಗಳೂರು, ಆ.21: ಕುದ್ರೋಳಿ ವಧಾಗೃಹವನ್ನು ಆ.25ರವರೆಗೆ ಹಗಲು-ರಾತ್ರಿ ತೆರೆದಿಡಲು ಮಂಗಳೂರು ಮಹಾನಗರ ಪಾಲಿಕೆಯು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ಕುರ್ಬಾನಿಗೆ ಈ ವಧಾಗೃಹವನ್ನು ಬಳಸಲು ಜಮೀಯತುಲ್ ಸ-ಅದಾ ಅಸೋಸಿಯೇಶನ್‌ನ ಅಧ್ಯಕ್ಷ ಅಲಿ ಹಸನ್ ಮತ್ತು ಗುತ್ತಿಗೆದಾರ ಜೆ. ಅಬ್ದುಲ್ ಖಾದರ್ ಮನವಿ ಮಾಡಿದ್ದಾರೆ.

ಕುದ್ರೋಳಿಯ ವಧಾಗೃಹದಲ್ಲಿ ಕುರ್ಬಾನಿ ಮಾಡಲು ಸಮಯಾವಧಿಯನ್ನು ಹೆಚ್ಚಿಸಲು ಜಮೀಯತುಲ್ ಸ-ಅದಾ ಅಸೋಸಿಯೇಶನ್ ಮನವಿ ಮಾಡಿತ್ತು. ಅದಕ್ಕೆ ಸ್ಪಂದಿಸಿರುವ ಮನಪಾ ಕಂದಾಯ ಆಯುಕ್ತರು ಆ.25ರವರೆಗೆ ಹಗಲು-ರಾತ್ರಿ ಕುದ್ರೋಳಿ ವಧಾಗೃಹ ತೆರೆದಿಡಲು ಅನುಮತಿ ನೀಡಿದ್ದಾರೆ. ಹಾಗಾಗಿ ಕುರ್ಬಾನಿ ಮಾಡಲು ಇರುವವರು ಇದರ ಸದುಪಯೋಗ ಮಾಡಬಹುದು ಎಂದು ತಿಳಿಸಿರುವ ಅಲಿ ಹಸನ್, ಕುರ್ಬಾನಿಗೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯಾರೂ ಗಾಳಿ ಮಾತಿಗೆ ಕಿವಿಗೊಡದೆ ಶಾಂತಿಯುತ ಹಬ್ಬ ಆಚರಿಸಲು ಮುಂದಾಗಬೇಕು. ಜಿಲ್ಲಾಡಳಿತ ಸಹಿತ ಪೊಲೀಸ್ ಇಲಾಖೆಯು ಕುರ್ಬಾನಿಗೆ ಸೂಕ್ತ ಬಂದೋಬಸ್ತ್ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News