×
Ad

ಉಡುಪಿ: ರೈಲಿನಲ್ಲಿ ಅಕ್ರಮ ಮದ್ಯ ವಶ

Update: 2018-08-21 20:54 IST

ಉಡುಪಿ, ಆ.21: ಮಂಗಳೂರು- ಮಡಂಗಾವ್ ಪ್ಯಾಸೆಂಜರ್ ರೈಲಿನಲ್ಲಿ ತಪಾಸಣೆ ನಡೆಸುತ್ತಿರುವಾಗ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ತಯಾರಿಕೆಯ 180ಎಂ.ಎಲ್‌ನ 96 ಮದ್ಯದ ಬಾಟಲಿಗಳನ್ನು ಉಡುಪಿ ರೈಲ್ವೆ ರಕ್ಷಣಾ ದಳ ವಶಪಡಿಸಿಕೊಂಡಿದೆ.

ಈ ಮದ್ಯದ ಬಾಟಲಿಗಳನ್ನು ಉಡುಪಿ ಅಬಕಾರಿ ಇಲಾಖೆ ವಶಕ್ಕೆ ನೀಡಲಾಗಿದೆ. ಉಡುಪಿ ರೈಲ್ವೆ ರಕ್ಷಣಾ ದಳದ ಸಬ್‌ಇನ್‌ಸ್ಪೆಕ್ಟರ್ ಸಂತೋಷ್ ಗಾಂವಕರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News