ಫೇಸ್‌ಬುಕ್‌ನಲ್ಲಿ ಅವಹೇಳನ: ಕ್ರಮಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ
Update: 2018-08-21 21:53 IST
ಉಡುಪಿ, ಆ.21: ಫೇಸ್‌ಬುಕ್‌ನಲ್ಲಿ ಹಿಂದು ದೇವಾಲಯ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಅಸಹ್ಯ ಶಬ್ದಗಳನ್ನು ಉಪಯೋಗಿಸಿಕೊಂಡು ಅವಹೇಳನ ಮಾಡುತ್ತಿರುವ ಲಕ್ಷ್ಮೀಕಾಂತ ಬೈಂದೂರು ಎಂಬ ನಕಲಿ ಖಾತೆಯನ್ನು ಹೊಂದಿರುವ ಇಬ್ರಾಹಿಂ ಖಲೀಲ್ ಎಂಬಾತನ್ನು ಬಂಧಿಸಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷದ್ ಬಜರಂಗದಳ ಸೋಮವಾರ ಉಡುಪಿ ಎಸ್ಪಿಗೆ ಮನವಿ ಸಲ್ಲಿಸಿತು.
ವಿಹಿಂಪ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್., ವಿಹಿಂಪ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಮಂದಾರ್ತಿ, ವಿಎಚ್‌ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ಸಿಂಧುವಾಲ, ನಗರ ಗೋರಕ್ಷಾ ಪ್ರಮುಖ್ ಪ್ರವೀಣ್ ಸಾಲಿಯಾನ್ ಹಾಗೂ ಕಾಪು ಪ್ರಖಂಡ ಕಾರ್ಯರ್ಶಿ ಜಯಪ್ರಕಾಶ್ ಉಪಸ್ಥಿತರಿದ್ದರು.