ಚಂದ್ರನ ಮೇಲ್ಮೈಯಲ್ಲಿ ಘನೀಕೃತ ನೀರಿನ ಸ್ಪಷ್ಟ ಪುರಾವೆ

Update: 2018-08-21 17:17 GMT

ವಾಶಿಂಗ್ಟನ್, ಆ. 21: ಭಾರತದ ‘ಚಂದ್ರಯಾನ-1’ ಗಗನನೌಕೆಯಲ್ಲಿರುವ ತನ್ನ ‘ಮೂನ್ ಮಿನರಾಲಜಿ ಮ್ಯಾಪರ್’ (ಚಂದ್ರನಲ್ಲಿರುವ ಖನಿಜಾಂಶಗಳನ್ನು ಪತ್ತೆಹಚ್ಚುವ ಉಪಕರಣ) ಚಂದ್ರನ ಮೇಲ್ಮೈಯಲ್ಲಿ ಘನೀಕೃತ ನೀರಿನ ಸ್ಪಷ್ಟ ಪುರಾವೆಯನ್ನು ಪತ್ತೆಹಚ್ಚಿದೆ ಎಂದು ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ) ಮಂಗಳವಾರ ಹೇಳಿದೆ.

2008ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾಯಿಸಿರುವ ಚಂದ್ರಯಾನ-1 ನೌಕೆಯಲ್ಲಿ ಚಂದ್ರನ ಮೇಲ್ಮೈಯಲ್ಲಿ ಘನೀಕೃತ ಮಂಜಿನ ಉಪಸ್ಥಿತಿಯನ್ನು ಪತ್ತೆಹಚ್ಚಲು ಸಾಧ್ಯವಾಗುವ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ನಾಸಾ ಹೇಳಿದೆ.

 ‘‘ಈ ಉಪಕರಣವು ಸಂಗ್ರಹಿಸಿರುವ ವಿವರಗಳಲ್ಲಿ ಪ್ರತಿಫಲನಕಾರಿ ಲಕ್ಷಣಗಳಿವೆ. ಮಂಜು ಇಂಥ ಲಕ್ಷಣಗಳನ್ನು ಹೊಂದಿದೆ. ಅದೂ ಅಲ್ಲದೆ ಈ ಮಂಜಿನ ಅಣುಗಳು ಇನ್‌ಫ್ರಾರೆಡ್ ಬೆಳಕನ್ನು ವಿಶಿಷ್ಟವಾಗಿ ಹೀರುತ್ತವೆ. ಈ ಮೂಲಕ ಜಲ ರೂಪದ ನೀರು ಅಥವಾ ಆವಿ ಅಥವಾ ಘನೀಕೃತ ಮಂಜನ್ನು ವಿಂಗಡಿಸಬಹುದಾಗಿದೆ’’ ಎಂದು ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News