ಚೀನಾ ನೆರವಿನ ಯೋಜನೆಗಳನ್ನು ರದ್ದುಪಡಿಸಿದ ಮಲೇಶ್ಯ

Update: 2018-08-21 17:19 GMT

ಕೌಲಾಲಂಪುರ, ಆ. 21: ಮಲೇಶ್ಯದ ಸಾಲಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಚೀನಾ ನೆರವಿನ ಯೋಜನೆಗಳನ್ನು ರದ್ದುಪಡಿಸಲಾಗಿದೆ ಎಂದು ಪ್ರಧಾನಿ ಮಹಾತಿರ್ ಮುಹಮ್ಮದ್ ಮಂಗಳವಾರ ಹೇಳಿದ್ದಾರೆ.

ಪೂರ್ವ ಕರಾವಳಿ ರೈಲು ಸಂಪರ್ಕವನ್ನು ನಿರ್ಮಿಸುವ 93,645 ಕೋಟಿ ರೂ. ಯೋಜನೆ ಮತ್ತು 17,473 ಕೋಟಿ ರೂ. ವೆಚ್ಚದ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆಗಳನ್ನು ಕೈಬಿಡಲಾಗಿದೆ.

ಪೂರ್ವ ಕರಾವಳಿ ರೈಲು ಸಂಪರ್ಕ ಯೋಜನೆಯು ಚೀನಾದ ‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆಯ ಭಾಗವಾಗಿದೆ. ಅದು ಮಲೇಶ್ಯ ಪರ್ಯಾಯ ದ್ವೀಪದ ಪೂರ್ವ ಕರಾವಳಿಯ ದಕ್ಷಿಣ ಚೀನಾ ಸಮುದ್ರವನ್ನು ಪಶ್ಚಿಮದಲ್ಲಿರುವ ಹಡಗುಯಾನ ಮಾರ್ಗಗಳೊಂದಿಗೆ ಸಂಪರ್ಕಿಸುವ ಯೋಜನೆಯಾಗಿದೆ.

 ‘‘ಇದು ಭಾರೀ ಮೊತ್ತದ ಹಣ ಹೂಡಬೇಕಾದ ಯೋಜನೆಗಳು. ಇಷ್ಟು ಹಣವನ್ನು ಭರಿಸಲು ನಮಗೆ ಸಾಧ್ಯವಿಲ್ಲ. ಅದರ ಮರುಪಾವತಿಯೂ ಸಾಧ್ಯವಿಲ್ಲ. ಅದೂ ಅಲ್ಲದೆ, ಈ ಕ್ಷಣದಲ್ಲಿ ಮಲೇಶ್ಯಕ್ಕೆ ಇಂಥ ಯೋಜನೆಗಳು ಅಗತ್ಯವಿಲ್ಲ’’ ಎಂದು ಪ್ರಧಾನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News