ಬದಲಾವಣೆ ಇಲ್ಲದಿದ್ದರೆ ವಿಶ್ವಸಂಸ್ಥೆ ಕುಸಿಯಬಹುದು: ಮಾನವಹಕ್ಕುಗಳ ಮುಖ್ಯಸ್ಥ

Update: 2018-08-21 17:21 GMT

ಜಿನೇವ (ಸ್ವಿಟ್ಸರ್‌ಲ್ಯಾಂಡ್), ಆ. 21: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯರು ಅಗಾಧ ಅಧಿಕಾರವನ್ನು ಹೊಂದಿದ್ದಾರೆ ಹಾಗೂ ಇದು ಬದಲಾಗದಿದ್ದರೆ ಈ ಜಾಗತಿಕ ಸಂಸ್ಥೆಯು ಕುಸಿಯಬಹುದು ಎಂಬುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ನಿರ್ಗಮನ ಮಖ್ಯಸ್ಥ ಝಾಯಿದ್ ರಅದ್ ಅಲ್-ಹುಸೈನ್ ಎಚ್ಚರಿಸಿದ್ದಾರೆ.

ಬ್ರಿಟನ್, ಚೀನಾ, ಫ್ರಾನ್ಸ್, ರಶ್ಯ ಮತ್ತು ಅಮೆರಿಕಗಳು ವಿಶ್ವಸಂಸ್ಥೆಯ ಹೆಚ್ಚಿನ ವ್ಯವಹಾರಗಳನ್ನು ನಡೆಸುತ್ತಿವೆ ಎಂಬ ಅಭಿಪ್ರಾಯವನ್ನು ವಿಶ್ವಸಂಸ್ಥೆಯ ಕೆಲವು ದೇಶಗಳು ಹೊಂದಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News