ಭಾರತದ ಜೊತೆ 2+2 ಮಾತುಕತೆ ಮಹತ್ವದ ಅವಕಾಶ: ಅಮೆರಿಕ

Update: 2018-08-21 17:22 GMT

ವಾಶಿಂಗ್ಟನ್, ಆ. 21: ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ 2+2 ಮಾತುಕತೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಭದ್ರತಾ ಸಹಕಾರಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಅವಕಾಶವಾಗಿದೆ ಎಂದು ಅಮೆರಿಕ ಹೇಳಿದೆ.

ಅಮೆರಿಕದ ‘ಪ್ರಮುಖ ರಕ್ಷಣಾ ಭಾಗೀದಾರ’ ಎಂಬ ಸ್ಥಾನಮಾನವನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬ ಬಗ್ಗೆ ಚರ್ಚಿಸಲು ಅದು ಉತ್ತಮ ವೇದಿಕೆಯಾಗಿದೆ ಎಂದಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಮಾತುಕತೆಗಾಗಿ ಸೆಪ್ಟಂಬರ್ 6ರಂದು ಭಾರತಕ್ಕೆ ಬರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News