ನಿರಾಶ್ರಿತರಿಗೆ ಕೇಂದ್ರದ ನೆರವು: ಮಾಜಿ ಡಿಸಿಎಂ ಆರ್.ಅಶೋಕ್ ಭರವಸೆ

Update: 2018-08-22 09:59 GMT

ಮಡಿಕೇರಿ, ಆ.22 :ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತ ರಿಗೆ ಬೆಂಗಳೂರು ಬಿಜೆಪಿ ಘಟಕದಿಂದ 15 ಲಾರಿಗಳಷ್ಟು ಪರಿಹಾರ ಸಾಮಾಗ್ರಿಗಳನ್ನು ನೀಡಲಾಗಿದೆ. ಈ ಪರಿಹಾರ ಸಾಮಾಗ್ರಿಗಳನ್ನು ಮಡಿಕೇರಿಗೆತಲುಪಿಸಿ ನಿರಾಶ್ರಿತರಿಗೆ ಹಂಚಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಇದು ಕಾವೇರಿ ನೀರು ನೀಡುತ್ತಿರುವ ಕೊಡಗಿನ ಜನತೆಯ ಸಂಕಷ್ಟಕ್ಕೆ ಬೆಂಗಳೂರಿನ ಜನತೆನೀಡುತ್ತಿರುವಸಹಾಯವಲ್ಲ, ನಾವು ಮಾಡುತ್ತಿರುವ ಕರ್ತವ್ಯ  ಎಂದು ಹೇಳಿದರು.
ನಿರಾಶ್ರಿತರಿಗೆ ಮನೆ ಹಾಗೂ ಶಾಲೆಗಳನ್ನು ನಿಮಿಸಿ ರ್ಕೊಡುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ಎಂದು ತಿಳಿಸಿದ ಅವರು, ದೇಶ ರಕ್ಷಣೆಗಾಗಿ ಸೈನಿಕರನ್ನು ನೀಡಿರುವ ಯೋಧರ ನಾಡಿನ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು. ಕೊಡಗಿನಲ್ಲಿ ಸಂಕಷ್ಟಕ್ಕೊಳಗಾದವರೊಂದಿಗೆ ಬೆಂಗಳೂರಿನ ನಾಗರಿಕರಿದ್ದಾರೆ ಎಂದು ಭರವಸೆ ನೀಡಿದರು.
ಕೇಂದ್ರ ಸರಕಾರದಿಂದ ಅಗತ್ಯ ಆಥಿರ್ಕ ನೆರವು ನಿರಾಶ್ರಿತರಿಗೆ ಹಾಗೂ ಹಾನಿಗೀಡಾದ ಪ್ರದೇಶಗಳ ಅಭಿವೃದ್ಧಿಗೆ ಸಿಗಲಿದೆ ಎಂದೂ ಆರ್.ಅಶೋಕ್ ತಿಳಿಸಿದರು.
ಶಾಸಕ ಕೆ.ಜಿ.ಬೋಪಯ್ಯ, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಮಾಜಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು ಈ ಸಂದರ್ಭ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News