ವಿವಾಹ ಸಮಾರಂಭ, ಹಬ್ಬಗಳ ಮೇಲೂ ಮಹಾಮಳೆ ಹಾನಿ ಎಫೆಕ್ಟ್

Update: 2018-08-22 10:44 GMT

ಮಡಿಕೇರಿ ಆ.22: ಮಹಾಮಳೆಯ ಹಾನಿಯಿಂದ ಆಘಾತಗೊಂಡಿರುವ ಕೊಡಗು ಜಿಲ್ಲೆಯಲ್ಲೀಗ ವಿವಾಹ ಸಮಾರಂಭ ಸೇರಿದಂತೆ ಹಬ್ಬಗಳ ಆಚರಣೆಗಳ ಮೇಲೂ ಕರಿ ಛಾಯೆ ಮೂಡಿದೆ.
ದಿಕ್ಕಾಪಾಲಾಗಿರುವ ಗ್ರಾಮೀಣರ ಬಗ್ಗೆ ಸುರಕ್ಷಿತ ನೆಲೆಯಲ್ಲಿರುವವರ ಮನ ಮಿಡಿಯುತ್ತಿದ್ದು, ಯಾರಲ್ಲೂ ಉತ್ಸಾಹದ ಕಳೆ ಕಾಣುತ್ತಿಲ್ಲ. ಹಬ್ಬ ಆಚರಿಸುವ ಮನಸ್ಸಿಲ್ಲ, ನಿಗಧಿಯಾದ ಮದುವೆಗಳಲ್ಲಿ ಸಂಭ್ರಮವಿಲ್ಲ. ಕೆಲವು ವಿವಾಹಗಳಂತು ಮುಂದೂಡಲ್ಪಟ್ಟಿವೆ.
ಕೊಡಗಿನಲ್ಲಿ ಆಟಿ ತಿಂಗಳು ಮುಗಿದ ದಿನದಿಂದಲೇ ವಿವಾಹ ಸಮಾರಂಭಗಳು ನಡೆಯುವುದು ವಾಡಿಕೆ.ಇದೇ ಪ್ರಕಾರವಾಗಿಆ.15 ರ ನಂತರ ಅನೇಕ ವಿವಾಹಗಳು ನಿಗದಿಯಾಗಿದ್ದವು. ಈ ಪೈಕಿ ಬಹುತೇಕ ವಿವಾಹ ಸಮಾರಂಭಗಳನ್ನು ಮುಂದೂಡಲಾಗಿದೆ. ಬಂಧುಮಿತ್ರರಿಗೆ ಈ ಮೊದಲೇ ಆಮಂತ್ರಣ ನೀಡಿದ್ದ ವಧು, ವರನ ಪೋಷಕರು ಇದೀಗ ವಿವಾಹ ಮುಂದೂಡಿರುವ ಸಂದೇಶವನ್ನು ರವಾನಿಸುತ್ತಿದ್ದಾರೆ. ಮಡಿಕೇರಿ ಬಾನುಲಿಯಲ್ಲಿಯೂ ಈ ಸಂಬಂಧಿತ ಜಾಹೀರಾತು ನೀಡಿ ವಿವಾಹ ಕಾಯರ್ಕ್ರಮ ಮುಂದೂಡಲ್ಪಟ್ಟ ವಿಚಾರ ತಿಳಿಸುತ್ತಿದ್ದಾರೆ. ಅನೇಕ ವಿವಾಹ ನಿಶ್ಚಿತಾಥರ್ಗಳು ಕೂಡ ಮುಂದೂಡಲ್ಪಟ್ಟಿವೆ.
ಕೃಷಿಪತ್ತಿನ ಸಹಕಾರ ಸಂಘಗಳಿಗೆ ಕಳೆದ ಶನಿವಾರ ಮತ್ತು ಭಾನುವಾರ ನಿಗದಿಯಾಗಿದ್ದ ಚುನಾವಣೆ ಕೂಡ ಮುಂದೂಡಲ್ಪಟ್ಟಿದೆ. ಆಗಸ್ಟ್ ತಿಂಗಳಿನಲ್ಲಿನಿಯಾಗಿದ್ದ ಸಂಘಗಳ ಮಹಾಸಭೆಯನ್ನೂ ಮುಂದೂಡಲಾಗಿದೆ.
ಅಂತೆಯೇ ಆ.29 ರಂದು ನಡೆಯಬೇಕಾಗಿದ್ದ ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಪಟ್ಟಣ ಪಂಚಾಯತ್ ಚುನಾವಣೆಮುಂದೂಡಲ್ಪಟ್ಟಿದೆ.ಮಡಿಕೇರಿ ಹಾಗೂಸೋಮವಾರಪೇಟೆ ತಾಲೂಕಿನಲ್ಲಿ ಮುಂಬರುವ ಗಣೇಶ ಚತುಥಿರ್ಯನ್ನುವಿವಿಧ ಉತ್ಸವ ಸಮಿತಿಗಳು ಸರಳವಾಗಿ ಆಚರಿಸಲು ನಿಧರ್ರಿಸಿವೆ. ಹಾಗೇ ಕೊಡಗಿನ ಪ್ರಮುಖ ಹಬ್ಬವಾಗಿರುವ ಸೆ.3 ರಂದು ಆಚರಿಸಲ್ಪಡುವ ಕೈಲ್ ಮುಹೂತರ್ಕ್ಕೂ ಪ್ರಕೃತಿ  ವಿಕೋಪದ ಕರಾಳೆ ಛಾಯೆ ಮೂಡಿದೆ.ಅದರಲ್ಲಿಯೂ ಹಬ್ಬದ ಸಂಭ್ರಮದಲ್ಲಿ ಮುಳುಗಿರುತ್ತಿದ್ದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರುವ್ಯಾಪ್ತಿಯ ಗ್ರಾಮಸ್ಥರು ಇದೀಗ ಎಲ್ಲವನ್ನೂ ಕಳೆದುಕೊಂಡು ಶೋಕಸಾಗರದಲ್ಲಿ ಮುಳುಗಿದ್ದಾರೆ. ತಮ್ಮ ಬದುಕನ್ನೇ ಕಳೆದುಕೊಂಡಿರುವವರು ಹಬ್ಬದ ನೆನಪಿನಲ್ಲೇ ಇಲ್ಲ. ಹೊಸ ಬೆಳಕಿನೊಂದಿಗೆ ಬದುಕು ಹಸನಾದರಷ್ಟೇ ಹಬ್ಬಗಳ ಆಚರಣೆಯ ಹರ್ಷ ನಿರಾಶ್ರಿತರ ಬಾಳಿನಲ್ಲಿ ಮೂಡಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News