ಬ್ರಹ್ಮಾವರ: ಯುವತಿ ನಾಪತ್ತೆ

Update: 2018-08-22 14:33 GMT

ಬ್ರಹ್ಮಾವರ, ಆ.22: ಇಲ್ಲಿನ ವಾರಂಬಳ್ಳಿ ಗ್ರಾಮದ ಬಿರ್ತಿ ನಿವಾಸಿ ಗ್ರೆಗೋರಿ ವಿನ್ಸೆಂಟ್ ಬಾರ್ನೆಸ್ ಎಂಬವರ ಸಾಕು ಮಗಳಾದ ರೆನಿಟಾ ಪ್ರಿಯ (21) ಎಂಬವರು ಸೋಮವಾರ ಬೆಳಗ್ಗೆ 10:30ಕ್ಕೆ ಮನೆಯಿಂದ ಹೋದವರು ವಾಪಾಸು ಬಾರದೇ ಕಾಣೆಯಾಗಿರುವುದಾಗಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಇಲ್ಲಿ ಕುಂದಾಪುರ ಕಸಬಾ ಗ್ರಾಮದ ಪೆರ್ರಿರಸ್ತೆ ನಿವಾಸಿ ಜಾವೇದ್ ಖಾನ್ ಎಂಬವರ ಮಗಳು ಸನೋಬರ್ (19) ಎಂಬವರು ಮಂಗಳವಾರ ರಾತ್ರಿ 10:45ಕ್ಕೆ ಮನೆಯಲ್ಲಿ ಊಟ ಮಾಡಿ ಮಲಗಿದ್ದು, 11:30ಕ್ಕೆ ನೋಡುವಾಗ ಮನೆಯ ಹಿಂದಿನ ಬಾಗಿಲು ತೆರೆದಿದ್ದು, ಸನೋಬರ್ ನಾಪತ್ತೆಯಾಗಿದ್ದರು. ತಕ್ಷಣ ಮನೆಯ ಸುತ್ತಮುತ್ತ ಹುಡುಕಿ, ಸಂಬಂಧಿಕ ಮನೆಗಳಲ್ಲಿ ವಿಚಾರಿಸಿದರೂ ಪತ್ತೆಯಾಗಲಿಲ್ಲ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News