ನಿಧನ: ಕೃಷಿಕ ಗ್ರೆಗರಿ ರಾಡ್ರಿಗಸ್

Update: 2018-08-22 14:51 GMT

ಬ್ರಹ್ಮಾವರ, ಆ.22: ಇಲ್ಲಿಗೆ ಸಮೀಪದ ಸಾಸ್ತಾನ ನಿವಾಸಿ, ಕೃಷಿಕ ಗ್ರೆಗರಿ ರಾಡ್ರಿಗಸ್ (68) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅವರು ಪತ್ನಿ ಲಿಲ್ಲಿ ರಾಡ್ರಿಗಸ್ ಹಾಗೂ ಪುತ್ರ ಮಂಗಳೂರು ಡಾಟ್‌ಕಾಂನ ಉಡುಪಿ ವರದಿಗಾರ ಮೈಕಲ್ ರಾಡ್ರಿಗಸ್ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಗುರುವಾರ ಬೆಳಗ್ಗೆ 9:30ಕ್ಕೆ ಮೃತದೇಹದ ಅಂತಿಮ ಯಾತ್ರೆ ಹೊರಡಲಿದ್ದು, 10 ಕ್ಕೆ ಸಾಸ್ತಾನದ ಸಂತ ಅಂತೋನಿ ಚರ್ಚ್‌ನಲ್ಲಿ ಪ್ರಾರ್ಥನೆ ಸಹಿತ ಅಂತಿಮ ವಿಧಿ ವಿಧಾನ ನಡೆಯಲಿವೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News