ಆದಂ ಉಸ್ತಾದರ ಅಗಲಿಕೆ ಸಮಸ್ತಕ್ಕೆ ದೊಡ್ಡ ನಷ್ಟ : ಶೈಖುನಾ ತ್ವಾಕ ಉಸ್ತಾದ್

Update: 2018-08-23 10:00 GMT

ಅಡ್ಡೂರು, ಆ. 23: ಸಮಸ್ತದ ಕರ್ನಾಟಕದ  ಹಿರಿಯ ವಿದ್ವಾಂಸಲ್ಲೊಬ್ಬರಾದ  ಆದಂ ಉಸ್ತಾದರ  (63) ಅಗಲಿಕೆಯಿಂದ ಕರ್ನಾಟಕದ ಪಾಲಿಗೆ ಸಮಸ್ತದ ಹಿರಿಯ ನಾಯಕರೊಬ್ಬರನ್ನು ಕಳಕೊಂಡಂತಾಗಿದೆ ಎಂದು  ಮಂಗಳೂರು ಸಂಯುಕ್ತ ಖಾಝಿ ಶೈಖುನಾ ತ್ವಾಕ ಉಸ್ತಾದರು ಪ್ರಸ್ತಾಪಿಸಿದ್ದಾರೆ.
 
ಆದಂ ಉಸ್ತಾದರು 1983 ರಿಂದ ಕರ್ನಾಟಕ ಜಂಇಯತುಲ್ ಉಲಮಾ ಮುಶಾವರ ಸಧ್ಯಸರು, ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಗುರುಪುರ ರೇಂಜ್ ಇದರ ಸ್ಥಾಪಕ ರೂವಾರಿ,  ಅಡ್ಡೂರು ವಲಯದ ಕೋಶಾಧಿಕರಿ, ನೂರುಲ್ ಇಸ್ಲಾಂ ಜುಮಾ ಮಸೀದಿಯ ಕರಿಯಂಗಳ ಪಲ್ಲಿಪಾಡಿ ಇದರ ಗೌರವಾಧ್ಯಕ್ಷರು ಮುಂತಾದ  ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮಡವೂರ್ ಸಿಎಂ ವಲಿಯುಲ್ಲಾಹ್,  ಅತ್ತಿಪಟ್ಟ ಉಸ್ತಾದ್, ಚಪ್ಪಾರಪಡವು ಉಸ್ತಾದ್ ಆಧ್ಯಾತ್ಮಿಕ  ಗುರುವರಿಯರಿಂದ ದೀಕ್ಷೆ ಪಡೆದ್ದಿದ್ದರು.
ತೊಡಾರ್, ಪಳ್ಳಿಪ್ಪಾಡಿ ಹಾಗೂ  ಗುರುಪುರ ಮಸೀದಿಗಳಲ್ಲಿ  ಖತೀಬರಾಗಿ ಸೇವೆಸಲ್ಲಿಸಿದ್ದಾರೆ.

ಸಮಸ್ತ ಕೇಂದ್ರ ಉಪಾಧ್ಯಕ್ಷ ಮಿತ್ತಬೈಲ್ ಉಸ್ತಾದ್, ಪೂಂಜಾಲಕಟ್ಟೆ ಉಸ್ತಾದ್, ಸಮಸ್ತ ಕೇಂದ್ರ ಮುಶಾವರ ಹಾಗೂ  ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್  ಕಾರ್ಯದರ್ಶಿ ಎಂ.ಎ. ಖಾಸಿಂ ಉಸ್ತಾದ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಉಸ್ಮಾನ್ ಪೈಝಿ, ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷರಾದ ಖಾಸಿಂ ದಾರಿಮಿ,  ಜಿಲ್ಲಾ ಕೋಶಾಧಿಕಾರಿ ಅಮೀರ್ ತಂಙಳ್ , ಬಾದುಷಾ ತಂಙಳ್, ಕರ್ನಾಟಕ ಜಂಇಯತುಲ್ ಉಲಮ ಪ್ರಧಾನ ಕಾರ್ಯದರ್ಶಿ ಬಂಬ್ರಾಣ ಉಸ್ತಾದ್, ಸುನ್ನೀ ಸಂದೇಶ ಮಾಸಿಕ ಸಂಪಾದಕರುಗಳಾದ ಕುಕ್ಕಿಲ ದಾರಿಮೀ,  ಹೈದರ್ ದಾರಿಮೀ, ಕೇಂದ್ರ ಜುಮಾ ಮಸ್ಜಿದ್  ಖತೀಬ್ ಸದಕತುಲ್ಲಾ ಪೈಝೀ, ಗುರುಪುರ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶರೀಫ್ ದಾರಿಮೀ, ಸಲೀಂ ಮದನಿ ಬೈರಿಕಟ್ಟೆ, ದ.ಕ. ಮದರಸ ಮ್ಯಾನೇಜ್ಮೆಂಟ್ ಕೋಶಾಧಿಕರಿ ಮೆಟ್ರೋ ಹಾಜೀ, ಮೀನುಗಾರಿಕ ನಿಗಮ ನಿರ್ದೇಶಕರಾದ ಅಬ್ದುಲ್ ಅಝೀಝ್ ಬಾಷ ಗುರುಪುರ, ಮಝ್ದ ಯೂಸುಫ್ ಹಾಜೀ, ಮದರ್ ಇಂಡಿಯಾ ಅಬ್ದುಲ್ ಲತೀಪ್, ಏರ್ ಇಂಡಿಯಾ ಉಸ್ಮಾನ್, ಮದರಸ ಮ್ಯಾನೇಜ್ಮೆಂಟ್ ಗುರುಪುರ ಅಧ್ಯಕ್ಷ ನೌಶಾದ್ ಹಾಜೀ, ಜಿಲ್ಲಾ  ಪಂಚಾಯತ್ ಸದಸ್ಯ ಯುಪಿ ಇಬ್ರಾಹಿಂ, ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ಅಧ್ಯಕ್ಷ ಜಮಾಲುದ್ದೀನ್ ದಾರಿಮೀ, ಬಾಮಿ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ರೀಯಾಝ್ ಮಿಲನ್, ನೋಟರಿ ಇಕ್ಬಾಲ್, ಮುಹಿಯ್ದೀನ್ ಸಅದಿ, ಮುಹಮ್ಮದ್ ಬಶೀರ್ ಅಧ್ಯಕ್ಷರು ನೂರುಲ್ ಇಸ್ಲಾಂ ಜುಮಾ ಮಸೀದಿಯ  ಕರಿಯಂಗಳ ಪಲ್ಲಿಪ್ಪಾಡಿ,ಹಾಗೂ ಅಡ್ಡೂರು ಕ್ಲಸ್ಟರ್ ನ ಪದಾಧಿಕಾರಿಗಳು ಮುಂತಾದ ಉಲಮಾ, ಉಮರಾ ನೇತಾರರು  ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News