×
Ad

ಪ್ರವಾಹ ಸಮಯದಲ್ಲಿ ಪ್ರದರ್ಶಿಸಿದ್ದ ಒಗ್ಗಟ್ಟನ್ನು ಜೀವನದುದ್ದಕ್ಕೂ ಮುಂದುವರಿಸಿ: ಈದ್ ಭಾಷಣದಲ್ಲಿ ಶುಹೈಬ್ ಮೌಲವಿ ಕರೆ

Update: 2018-08-23 19:11 IST

ತಿರುವನಂತಪುರಂ, ಆ.23: ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಬಕ್ರೀದ್ ಆಚರಿಸಲಾಯಿತು. ಈದ್ ನಮಾಝ್ ಬಳಿಕ ನಡೆದ ಭಾಷಣದಲ್ಲಿ ಮುಸ್ಲಿಂ ಧರ್ಮಗುರುಗಳು ನಿರಾಶ್ರಿತರ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.

ಪ್ರವಾಹ ಸಮಯದಲ್ಲಿ ನೀವು ತೋರಿಸಿದ ಒಗ್ಗಟ್ಟನ್ನು ಜೀವನದುದ್ದಕ್ಕೂ ಮುಂದುವರಿಸಿಕೊಂಡು ಹೋಗಬೇಕೆಂದು ತಿರುವನಂತಪುರಂ ಪಾಳಯಂ ಇಮಾಮ್ ವಿ.ಪಿ. ಶುಹೈಬ್ ಮೌಲವಿ ಕರೆ ನೀಡಿದರು. ಧರ್ಮ, ರಾಜಕೀಯಕ್ಕೆ ಅತೀತವಾಗಿ ಎಲ್ಲ ಸಹೋದರರನ್ನು ಈ ಪ್ರವಾಹ ಒಗ್ಗೂಡಿಸಿತು. ಮುಸ್ಲಿಮರು ಹಬ್ಬ ಎಂದು ದೂರ ಉಳಿಯದೆ ನಿರಾಶ್ರಿತರಿಗೆ ನೆರವಾಗುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಬಕ್ರೀದ್ ಆಚರಣೆಗೆ ತೆಗೆದಿರಿಸಿದ ಹಣವನ್ನು ಸಂತ್ರಸ್ತರಿಗೆ ನೀಡಬೇಕೆಂದು ಇಮಾಮ್ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News