ಉದ್ಯಾವರ: ಆ.24ರಂದು ಬಕ್ರೀದ್ ಸೌಹಾರ್ದಕೂಟ
ಉದ್ಯಾವರ, ಆ.23: ಉದ್ಯಾವರದ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಸೌಹಾರ್ದ ಸಮಿತಿ (ಕಥೋಲಿಕ್ ಸಭಾ)ದ ಆಶ್ರಯದಲ್ಲಿ ಸರ್ವ ಧರ್ಮೀಯರ ಸಹಕಾರದೊಂದಿಗೆ ಆ.24ರ ಸಂಜೆ 5:30ಕ್ಕೆ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಸಭಾಂಗಣದಲ್ಲಿ ‘ಬಕ್ರೀದ್ ಸೌಹಾರ್ದ ಕೂಟ’ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌಹಾರ್ದ ಸಮಿತಿ ಉದ್ಯಾವರ ಇದರ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾ ಸರಕಾರಿ ವಕೀಲ ಮಹಮ್ಮದ್ ಸುಹಾನ್, ಉಡುಪಿ ಧರ್ಮಪ್ರಾಂತದ ಕುಲಪತಿ ಹಾಗೂ ಉದ್ಯಾವರ ಚರ್ಚ್‌ನ ಧರ್ಮಗುರು ವಂ. ಸ್ಟ್ಯಾನಿ ಬಿ. ಲೋಬೊ, ಉಡುಪಿ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ನಾಗರಾಜ್ ಜಿ.ಎಸ್. ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಾವರ ಹಲಿಮಾ ಸಾಬ್ಜು ಆಡಿಟೋರಿಯಂನ ನಿರ್ದೇಶಕ ಹಾಜಿ ಅಬ್ದುಲ್ ಸಾಹೇಬ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಭಾಗವಹಿಸಲಿದ್ದಾರೆ ಎಂದು ಸೌಹಾರ್ದ ಸಮಿತಿಯ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದ್ದಾರೆ.