×
Ad

ಕೈಗಾರಿಕೋದ್ಯಮಿ ರಾಧಾಕೃಷ್ಣ ರಾವ್ ನಿಧನ

Update: 2018-08-23 20:12 IST

ಮಂಗಳೂರು, ಆ.23: ಮಂಗಳೂರಿನ ಪ್ರಪ್ರಥಮ ಇಂಜಿನಿಯರಿಂಗ್ ಕಂಪೆನಿಯಾದ ‘ವಿವೇಕ್ ಇಂಜಿನಿಯರಿಂಗ್ ಕಂಪೆನಿ’ ಸಂಸ್ಥಾಪಕ, ಕೈಗಾರಿಕೋದ್ಯಮಿ ಬಿ.ಎನ್.ರಾಧಾಕೃಷ್ಣ ರಾವ್(74) ಗುರುವಾರ ನಿಧನರಾದರು.

ಯಶಸ್ವಿ ಕೈಗಾರಿಕೋದ್ಯಮಿಯಾದ ರಾಧಾಕೃಷ್ಣ ರಾವ್ 1972ರಲ್ಲಿ ಇಂಜಿನಿಯರಿಂಗ್ ಕಂಪೆನಿಯನ್ನು ಹುಟ್ಟುಹಾಕಿದರು. 1982ರಲ್ಲಿ ಸುರತ್ಕಲ್‌ನಲ್ಲಿ ಲಯನ್ಸ್ ಕ್ಲಬ್ ಕೇಂದ್ರ ಆರಂಭಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲದೆ, ಸುರತ್ಕಲ್‌ನಲ್ಲಿ ವಿಶೇಷ ಮಕ್ಕಳ ಶಾಲೆಯನ್ನು ಆರಂಭಿಸಿದರು. ರವಿಶಂಕರ್ ಗುರೂಜಿ ನೇತೃತ್ವದ ‘ಆರ್ಟ್ ಆಫ್ ಲಿವಿಂಗ್’ನ ಸಂಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News