×
Ad

ಕೇರಳ ನೆರೆಪೀಡಿತ ಪ್ರದೇಶಕ್ಕೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಭೇಟಿ

Update: 2018-08-23 20:21 IST

ಮಂಗಳೂರು, ಆ.23: ಕೇರಳ ನೆರೆ ಪೀಡಿತ ಪ್ರದೇಶಕ್ಕೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ನೇತೃತ್ವದಲ್ಲಿ ಪದಾಧಿಕಾರಿಗಳ ತಂಡ ಭೇಟಿ ನೀಡಿ, ಅಗತ್ಯ ಉಡುಪು, ದಿನಬಳಕೆ ವಸ್ತುಗಳನ್ನು ವಿತರಿಸಲಾಯಿತು.

ಕೇರಳದ ಬರಪೀಡಿತ ಪ್ರದೇಶಗಳಾದ ವಯನಾಡು ಜಿಲ್ಲೆಯ ಕನ್ನಿಚೇರ, ಪುಳಪಳಿ, ಮತ್ತು ಮುಲ್ಲನ್‌ಕೊಳ್ಳಿ ಪಂಚಾಯತ್ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಅಗತ್ಯ ಆಹಾರ ಸಾಮಗ್ರಿ ವಿತರಿಸಲಾಯಿತು.

ಈ ಸಂದರ್ಭ ಕೇರಳ ರಾಜ್ಯದ ಸುಲ್ತಾನ್‌ಭತ್ತೇರಿ ವಿಧಾನಸಭಾ ಕ್ಷೇತ್ರದ ಶಾಸಕ ಐ.ಸಿ. ಬಾಲಕೃಷ್ಣನ್ ಮತ್ತು ಬ್ಲಾಕ್ ಪಂಚಾಯತ್ ಅಧ್ಯಕ್ಷ ದೀಲಿಪ್, ಪಿ.ನಾರಾಯಣ್ ನಾಯರ್ ಹಾಗೂ ದ.ಕ. ಜಿಲ್ಲಾ ಕಾರ್ಯದರ್ಶಿಯಾದ ಪ್ರೇಮ್ ಬಲ್ಲಾಳ್‌ಭಾಗ್, ಪಕ್ಷದ ಮುಖಂಡರಾದ ದಿನೇಶ್ ರಾವ್, ಸಿಬಿ ಸಾಬೂ, ಅನಿಲ್ ಪಿ.ಬೋಸ್, ಮನಪಾ ಮಾಜಿ ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಮಾಜಿ ಉಪ ಮೇಯರ್ ನಮಿತಾ ದೀನೇಶ್, ಮನಪಾ ಮಾಜಿ ಸದಸ್ಯರಾದ ಭಾರತಿ ದೀನೇಶ್, ವಿಜಯಲಕ್ಷ್ಮೀ, ಸರಳಾ ಕರ್ಕೇರ, ಸುರೇಖಾ ಚಂದ್ರಹಾಸ್, ಗೀತಾ ಕೊಲ್ಚ್‌ರ್, ಸುನೀತಾ ರೋಡ್ರಿಗಸ್ ಉಳ್ಳಾಲ, ಗೀತಾ ಅತ್ತಾವರ, ಸುನಿತಾ ಪಾವುರು, ಜೂಲಿಯಕ್ರಾಸ್ತಾ, ಸುಳ್ಯ ಉಪಸ್ಥಿತರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News