ಪ್ಯಾರಿಸ್‌ನಲ್ಲಿ ಚೂರಿ ದಾಳಿ: 1 ಸಾವು, ಇಬ್ಬರಿಗೆ ಗಂಭೀರ ಗಾಯ

Update: 2018-08-23 15:13 GMT

ಪ್ಯಾರಿಸ್, ಆ. 23: ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಟ್ರಾಪ್ಸ್ ಎಂಬ ಪಟ್ಟಣದಲ್ಲಿ ಗುರುವಾರ ಬೆಳಗ್ಗೆ ವ್ಯಕ್ತಿಯೊಬ್ಬ ಚೂರಿಯಿಂದ ನಡೆಸಿದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದಾಳಿಯ ಬಳಿಕ ಕಟ್ಟಡವೊಂದರಲ್ಲಿ ಅಡಗಲು ಯತ್ನಿಸಿದ ದುಷ್ಕರ್ಮಿಯನ್ನು ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಪೊಲೀಸ್ ಮೂಲವೊಂದು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ಆದರೆ, ಅವನನ್ನು ಕೊಲ್ಲಲಾಗಿದೆಯೇ ಎನ್ನುವುದನ್ನು ಅದು ಸ್ಪಷ್ಟಪಡಿಸಿಲ್ಲ.

‘‘ದಾಳಿಯ ಹಿಂದಿನ ಕಾರಣ ಮತ್ತು ದುಷ್ಕರ್ಮಿಯ ವೈಯಕ್ತಿಕ ವಿವರಗಳು ಗೊತ್ತಾಗಿಲ್ಲ’’ ಎಂದು ಪೊಲೀಸ್ ಮೂಲವು ‘ರಾಯ್ಟರ್ಸ್’ಗೆ ತಿಳಿಸಿದೆ.

ಟ್ರಾಪ್ಸ್ ಪಟ್ಟಣದಲ್ಲಿ ಸುಮಾರು 30,000 ಜನಸಂಖ್ಯೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News