ಸಿಖ್ ವ್ಯಕ್ತಿಯ ಹತ್ಯೆ: ಆರೋಪಿ ಬಂಧನ

Update: 2018-08-23 15:29 GMT

ನ್ಯೂಯಾರ್ಕ್, ಆ. 23: ಅಮೆರಿಕದ ನ್ಯೂಜರ್ಸಿಯಲ್ಲಿ ಕಳೆದ ವಾರ ನಡೆದ ಸಿಖ್ ವ್ಯಕ್ತಿಯೋರ್ವರ ಹತ್ಯೆಗೆ ಸಂಬಂಧಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

55 ವರ್ಷದ ತ್ರಿಲೋಕ್ ಸಿಂಗ್‌ರ ಮೃತದೇಹವು ಆಗಸ್ಟ್ 16ರಂದು ಅವರ ಅಂಗಡಿಯಲ್ಲಿ ಪತ್ತೆಯಾಗಿತ್ತು. ಅವರ ಎದೆಯಲ್ಲಿ ಇರಿತದ ಗಾಯಗಳಿದ್ದವು.

ನೆವಾರ್ಕ್ ನಿವಾಸಿ 55 ವರ್ಷದ ಉಬೀರ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಸಿಂಗ್‌ರನ್ನು ಕೊಂದ ಆರೋಪವನ್ನು ಹೊರಿಸಲಾಗಿದೆ ಎಂದು ಎಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ರಾಬರ್ಟ್ ಲಾರಿನೊ ತಿಳಿಸಿದರು. ಆರೋಪಿಯು ಅದೇ ಅಂಗಡಿಯಲ್ಲಿ ಅನಿಯಮಿತವಾಗಿ ಕೆಲಸ ಮಾಡುತ್ತಿದ್ದನು. ಹತ್ಯೆಗೆ ಕಾರಣ ಗೊತ್ತಾಗಿಲ್ಲ. ಅದು ಕಳೆದ ಮೂರು ವಾರಗಳ ಅವಧಿಯಲ್ಲಿ ಅಮೆರಿಕದಲ್ಲಿ ಸಿಖ್ಖರ ಮೇಲೆ ನಡೆದ ಮೂರನೇ ದಾಳಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News