ಕುಲಭೂಷಣ್ ಜಾಧವ್ ವಿರುದ್ಧ ಪ್ರಬಲ ಪುರಾವೆ ಇದೆ: ಪಾಕ್ ನೂತನ ವಿದೇಶ ಸಚಿವ

Update: 2018-08-23 15:31 GMT

ಇಸ್ಲಾಮಾಬಾದ್, ಆ. 23: ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸಲು ತಮ್ಮಲ್ಲಿ ಪ್ರಬಲ ಪುರಾವೆಯಿದೆ ಎಂದು ಪಾಕಿಸ್ತಾನದ ನೂತನ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಗುರುವಾರ ಹೇಳಿದ್ದಾರೆ.

ಜಾಧವ್ ಭಾರತೀಯ ಗುಪ್ತಚರ ಸಂಸ್ಥೆಗಳಿಗಾಗಿ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದರು ಎಂಬುದಾಗಿ ಅವರ ವಿರುದ್ಧ ಪಾಕಿಸ್ತಾನ 2016ರಲ್ಲಿ ಆರೋಪ ಹೊರಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ನ್ಯಾಯಾಲಯವೊಂದು ಜಾಧವ್‌ಗೆ ಮರಣ ದಂಡನೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

ಪಾಕ್ ಸೇನಾ ನ್ಯಾಯಾಲಯದ ತೀರ್ಪನ್ನು ಭಾರತ 2017 ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.

ಜಾಧವ್ ನೌಕಾಪಡೆಯ ಮಾಜಿ ಅಧಿಕಾರಿ ಎಂಬುದಾಗಿ ಭಾರತ ಹೇಳುತ್ತಿದೆ.

ಅಂತಾರಾಷ್ಟ್ರೀಯ ನ್ಯಾಯಾಲಯವು ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿದೆ. ಅದರ ಅಂತಿಮ ತೀರ್ಪಿಗಾಗಿ ಕಾಯಲಾಗುತ್ತಿದೆ.

‘‘ಜಾಧವ್ ವಿರುದ್ಧ ನಮ್ಮಲ್ಲಿ ಪ್ರಬಲ ಪುರಾವೆಯಿದೆ ಹಾಗೂ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಮಗೆ ಗೆಲುವಾಗುವ ಬಗ್ಗೆ ವಿಶ್ವಾಸವಿದೆ’’ ಎಂದು ಕುರೇಶಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News