ಉಡುಪಿ ನಗರಸಭೆ: ಸಚಿವ ಜಯಮಾಲರಿಂದ ಮತಯಾಚನೆ
Update: 2018-08-23 21:21 IST
ಉಡುಪಿ, ಆ.23: ಆ.31ರಂದು ನಡೆಯುವ ಉಡುಪಿ ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು ಇಂದು ಬೆಳಿಗ್ಗೆ ಪರ್ಕಳ ಹಾಗೂ ಸರಳಬೆಟ್ಟು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಭಾಗವಹಿಸಿದ್ದರು.
ಉಡುಪಿ ನಗರಸಭಾ ವ್ಯಾಪ್ತಿಯ ಕಕ್ಕುಂಜೆ, ಬನ್ನಂಜೆ, ಕೊಡಂಕೂರು, ಸುಬ್ರಹ್ಮಣ್ಯನಗರ, ಪೆರಂಪಳ್ಳಿ, ಕಸ್ತೂರ್ಬಾ ನಗರ ವಾರ್ಡ್‌ಗಳಲ್ಲಿ ಸಚಿವೆ ಜಯಮಾಲಾ ಚುನಾವಣಾ ಪ್ರಚಾರ ನಡೆಸಿದರು.