×
Ad

ಉಡುಪಿ: ಸ್ಥಳೀಯ ಸಂಸ್ಥೆ ಚುನಾವಣೆಗೆ 261 ಮಂದಿ ಕಣದಲ್ಲಿ

Update: 2018-08-23 21:22 IST

ಉಡುಪಿ, ಆ.23:  ಆ.31ರಂದು ಉಡುಪಿ ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳ ಒಟ್ಟು 97 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ 261 ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.

ನಾಮಪತ್ರ ಹಿಂದೆಗೆದುಕೊಳ್ಳಲು ಅಂತಿಮ ದಿನವಾದ ಇಂದು ಜಿಲ್ಲೆಯಲ್ಲಿ ಒಟ್ಟು 13 ಮಂದಿ ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡರು. ಇವರಲ್ಲಿ ಉಡುಪಿ ನಗರಸಭೆಯಲ್ಲಿ 4 ಮಂದಿ, ಕುಂದಾಪುರ ಪುರಸಭೆಯಲ್ಲಿ 4 ಮಂದಿ, ಕಾರ್ಕಳ ಪುರಸಭೆಯಲ್ಲಿ ಒಬ್ಬರು ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಒಬ್ಬರು ಸೇರಿದ್ದಾರೆ.

ಹೀಗಾಗಿ ಉಡುಪಿ ನಗರಸಭೆಯ 35 ವಾರ್ಡುಗಳಿಗೆ ಇದೀಗ 91 ಮಂದಿ ಅಂತಿಮವಾಗಿ ಸ್ಪರ್ಧೆಗೆ ಉಳಿದುಕೊಂಡಿದ್ದಾರೆ. ಇನ್ನುಳಿದಂತೆ ಕುಂದಾಪುರ ಪುರಸಭೆಯ 23 ಸ್ಥಾನಗಳಿಗೆ 68 ಮಂದಿ, ಕಾರ್ಕಳ ಪುರಸಭೆಯ 23 ಸ್ಥಾನಗಳಿಗೆ 56 ಮಂದಿ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ 16 ಸ್ಥಾನಗಳಿಗೆ ಒಟ್ಟು 46 ಮಂದಿ ಸ್ಪರ್ಧಾಕಣದಲ್ಲಿದ್ದು ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ ಎಂದು ಜಿ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News