ಗಾಂಜಾ ಸೇವನೆ: ಯುವಕ ಬಂಧನ
Update: 2018-08-23 21:41 IST
ಮಂಗಳೂರು, ಆ.23: ಶಕ್ತಿನಗರ ರಮಾಶಕ್ತಿ ಬಳಿ ಗಾಂಜಾ ಸೇವನೆ ಆರೋಪದಲ್ಲಿ ಯುವಕನೋರ್ವನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಶಕ್ತಿನಗರ ನಿವಾಸಿ ಶಿವ (24) ಬಂಧಿತ ಆರೋಪಿ. ಈತ ಆ. 23ರಂದು ಪದವು ಗ್ರಾಮದ ಶಕ್ತಿನಗರ ರಮಾಶಕ್ತಿ ಬಳಿ ಎಂಬಲ್ಲಿ ಸಿಗರೇಟು ಸೇದುತ್ತಿದ್ದು, ಆತನನ್ನು ವಿಚಾರಿಸಿದಾಗ ತೊದಲು ಮಾತನಾಡುತ್ತಿದ್ದು, ಬಾಯಿಯಿಂದ ಅಮಲು ಸೇವನೆ ಮಾಡಿರುವ ವಾಸನೆ ಬರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಿದಾಗ ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.