×
Ad

ಸುರತ್ಕಲ್ : ಎಸ್‌ಡಿಪಿಐನಿಂದ ರಕ್ತದಾನ ಶಿಬಿರ

Update: 2018-08-23 21:44 IST

ಮಂಗಳೂರು, ಆ.23: ಎಸ್‌ಡಿಪಿಐ ಸುರತ್ಕಲ್ ವಾರ್ಡ್ ಮತ್ತು ಇನ್ಫರ್‌ಮೇಶನ್ ಆ್ಯಂಡ್ ಎಂಪವೆರ್‌ಮೆಂಟ್ ಸೆಂಟರ್ ಚೊಕ್ಕಬೆಟ್ಟು ಹಾಗೂ ಇಂಡಿಯನ್ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗನಿಂದ 72ನೇ ಸ್ವಾತಂತ್ರ ದಿನದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಕಾನ ಜಂಕ್ಷನ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಎಸ್‌ಡಿಪಿಐ ವಾರ್ಡ್ ಸಮಿತಿ ಅಧ್ಯಕ್ಷ ಸಲಾಂ ಕಾನ ಧ್ವಜಾರೋಹಣ ನೆರವೇರಿಸಿದರು. ಇನ್ಫರ್‌ಮೇಶನ್ ಆ್ಯಂಡ್ ಎಂಪವೆರ್ ಮೆಂಟ್ ಸೆಂಟರ್ ಕಾರ್ಯದರ್ಶಿ ಸಫೀಲ್ ಇರುವೈಲು, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಡ್ವರ್ಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾನ, ಸುರತ್ಕಲ್, ಚೊಕ್ಕಬೆಟ್ಟು ಮತ್ತು ಕೃಷ್ಣಾಪುರ ಪರಿಸರದ ನಾಗರಿಕರು ಬಹಳ ಉತ್ಸಾಹದಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಪಿಎಫ್‌ಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾದರ್ ಕುಳಾಯಿ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕರ್ ಕುಳಾಯಿ, ಎಸ್‌ಡಿಪಿಐ ಜಿಲ್ಲಾ ಕೋಶಾಧಿಕಾರಿ ನೂರುಲ್ಲಾ ಕುಳಾಯಿ, ಎಸ್‌ಡಿಪಿಐ ಕಾನ ಬ್ರಾಂಚ್ ಅಧ್ಯಕ್ಷ ಇರ್ಫಾನ್ ಕಾನ, ಬದ್ರಿಯಾ ಜುಮಾ ಮಸೀದಿ ಕಾನಾ ಇದರ ಅಧ್ಯಕ್ಷ ಬಿ.ಎಸ್. ಉಮರ್ ಮತ್ತು ಅಧ್ಯಕ್ಷ ಗುಲಾಮ್ ಮೊಯಿದೀನ್ ಉಪಸ್ಥಿತರಿದ್ದರು. ಇಬ್ರಾಹೀಂ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News