×
Ad

ಗಂಗೊಳ್ಳಿ: ಗೋಮಾಂಸ ಸಾಗಾಟದ ಶಂಕೆ; ಯುವಕರಿಬ್ಬರ ಮೇಲೆ ಹಲ್ಲೆ

Update: 2018-08-23 22:15 IST

ಕುಂದಾಪುರ, ಆ.23: ಅಕ್ರಮವಾಗಿ ದನದ ಮಾಂಸವನ್ನು ಸಾಗಿಸುತಿದ್ದಾರೆ ಎಂದು ಆರೋಪಿಸಿ ಯುವಕ ತಂಡವೊಂದು ಬೈಕ್‌ನಲ್ಲಿ ಸಾಗುತಿದ್ದ ಯುವಕ ರಿಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ಅಪರಾಹ್ನ ಗಂಗೊಳ್ಳಿಯಲ್ಲಿ ನಡೆದಿದೆ.

ಗಂಗೊಳ್ಳಿ ಶಾಹೀ ಮೊಹಲ್ಲಾದ ಅಬ್ದುಲ್ ಸಮ್ಮದ್ ಎಂಬವರ ಪುತ್ರ ಅಬು ಸೂಫಿಯಾನ್ (19) ಹಾಗೂ ಸಾದಿಕ್ ಎಂಬವರ ಪುತ್ರ ಸುಹೈಲ್ (20) ಎಂಬವರು ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡವರಾಗಿದ್ದಾರೆ. ಇವರಿಬ್ಬರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಈ ಪ್ರಕರಣದ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ಗಂಗೊಳ್ಳಿ ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ಅಬು ಸೂಫಿಯಾನ್ ಅವರು ನಿನ್ನೆ ತನ್ನ ಮೋಟಾರು ಬೈಕ್‌ನಲ್ಲಿ ಸುಹೈಲ್‌ರನ್ನು ಕೂರಿಸಿಕೊಂಡು ತಾಕೀಯಾ ಮೊಹಲ್ಲಾದ ಸಂಬಂಧಿಕರ ಮನೆಗೆ ಹೋಗಿ ವಾಪಾಸಾಗುವ ಸಂದರ್ಭದಲ್ಲಿ ಆಪರಾಹ್ನ 1:30ರ ಸುಮಾರಿಗೆ ಗಂಗೊಳ್ಳಿಯ ವಿರೇಶ್ವರ ದೇವಸ್ಥಾನದ ಎದುರು ಕೆರೆಯ ಬಳಿ ಘಟನೆ ನಡೆದಿದೆ.

ಸೂಫಿಯಾನ್ ಅವರಿಗೆ ಪರಿಚಿತರೇ ಆಗಿರುವ ಆರೋಪಿಗಳಾದ ಪ್ರಕಾಶ್, ನವೀನ್, ಗುರುರಾಜ್, ನವೀನ್ ಖಾರ್ವಿ, ಗಣೇಶ ಕಿಣಿ, ನಿತೀನ್, ವಿವೇಕ ಇವರು ಮನೆಯ ಸಮೀಪದಲ್ಲೇ ಇರುವ ದೇವಸ್ಥಾನದ ಬಳಿ ಮೋಟಾರು ಸೈಕಲ್‌ನ್ನು ತಡೆದು ನಿಲ್ಲಿಸಿ ಬೈಕ್‌ನ ಬಾಕ್ಸ್‌ನ್ನು ಪರಿಶೀಲಿಸಿ ದನದ ಮಾಂಸವನ್ನು ತೆಗೆದುಕೊಂಡು ಹೋಗುತಿದ್ದೀರಿ ಎಂದು ಆರೋಪಿಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅಶ್ಲೀಲವಾಗಿ ನಿಂದಿಸಿರುವುದಾಗಿ ಸೂಫಿಯಾನ್ ಗಂಗೊಳ್ಳಿ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಬೈಕ್‌ನಲ್ಲಿ ಏನೂ ಸಿಗದಿದ್ದಾಗ ಆಕ್ರೋಶಿತರಾಗಿ ‘ನೀವು ದಿನಾ ಮಾಂಸ ಕೊಂಡು ಹೋಗುತ್ತೀರಿ. ನಮಗೆ ಗೊತ್ತಿದೆ’ ಎಂದು ಹೇಳಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಬೈಕನ್ನು ಜಖಂಗೊಳಿಸಿ ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 ಬಂಧಿತ ಆರೋಪಿಗಳೆಲ್ಲರೂ ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News