×
Ad

ಕೆಎಸ್ಸಾರ್ಟಿಸಿಯಿಂದ ಮಡಿಕೇರಿ-ಸುಳ್ಯ ನಡುವೆ ಮಿನಿಬಸ್ ಸೇವೆ

Update: 2018-08-23 22:44 IST

ಮಂಗಳೂರು, ಆ. 23: ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ದ.ಕ. ಜಿಲ್ಲೆಯ ಸುಳ್ಯ ನಡುವೆ ಪರ್ಯಾಯ ಮಾರ್ಗವಾಗಿ ಮಿನಿಬಸ್ ಸೇವೆ ನೀಡಲು ಮಂಗಳೂರು ಕೆಎಸ್ಸಾರ್ಟಿಸಿ ಮುಂದಾಗಿದೆ.

ರಾ.ಹೆ.275 (ಮಾಣಿ-ಮೈಸೂರು-ಬೆಂಗಳೂರು)ರ ನೇರಮಾರ್ಗಮಡಿಕೇರಿ ಮತ್ತು ಸಂಪಾಜೆ (51 ಕಿ.ಮೀ.)ಯಲ್ಲಿ ಭೂಕುಸಿತ ಉಂಟಾದ ಹಿನ್ನೆಲೆ ಪಣತ್ತೂರು-ಕರಿಕೆ ಮತ್ತು ಭಾಗಮಂಡಲ(91 ಕಿ.ಮೀ.)ವಾಗಿ ಮಿನಿಬಸ್‌ಗಳು ಸಂಚರಿಸಲಿವೆ. ಪುತ್ತೂರು ಡಿಪೋದಿಂ ಮಡಿಕೇರಿ ಮತ್ತು ಸುಳ್ಯ ಮಾರ್ಗವಾಗಿ ಬಸ್ ಸೇವೆ ದೊರೆಯಲಿದೆ ಎಂದು ಕೆಎಸ್ಸಾರ್ಟಿಸಿ ಮೂಲಗಳು ತಿಳಿಸಿವೆ.

ಈ ಮಿನಿಬಸ್ ಸೇವೆಯಿಂದ ಎರಡೂ ನಗರಗಳ ಮಧ್ಯೆ ನೂರಾರು ನೌಕರರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಮಿನಿ ಬಸ್‌ಗಳು ಕೇರಳದ ಮಾರ್ಗವಾಗಿ 12ಕಿ.ಮೀ. ಚಲಿಸಲಿವೆ.

ಒನ್ ವೇ ಮಾರ್ಗದಲ್ಲಿ ಬಸ್‌ಗಳು ಪ್ರಯಾಣಿಸಲು 3:30 ಗಂಟೆ ಸಮಯ ಹಿಡಿಯುತ್ತಿದೆ. ಗುರುವಾರದಿಂದ ಮೂರು ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಇನ್ನು ಎರಡು ಮಿನಿಬಸ್‌ಗಳು ಶುಕ್ರವಾರದಿಂದ ಚಾಲನೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ. 

ಪ್ರತಿದಿನ ಮಡಿಕೇರಿ-ಸುಳ್ಯ ನಡುವೆ ಒಟ್ಟು ಐದು ಮಿನಿಬಸ್‌ಗಳಿಂದ 14 ಸಿಂಗಲ್ ಟ್ರಿಪ್ ಹೊಡೆಯಬಹುದು.

ಬಸ್ ವೇಳಾಪಟ್ಟಿ

ಮಡಿಕೇರಿಯಿಂದ ಸುಳ್ಯಕ್ಕೆ: ಬೆಳಗ್ಗೆ 7:15, 8:00, 9:00, 11:15, ಮಧ್ಯಾಹ್ನ 12:00, 4:00, 4:30.

ಸುಳ್ಯದಿಂದ ಮಡಿಕೇರಿಗೆ: ಬೆಳಗ್ಗೆ 7:00, 7:45, 11:45, ಮಧ್ಯಾಹ್ನ 12:15, 1:15, 3:30, 4:30.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News