‘ಸದ್ಗಮಯ’ದಿಂದ ಕೇರಳಕ್ಕೆ ನೆರವು
Update: 2018-08-23 22:45 IST
ಮಂಗಳೂರು, ಆ. 23: ಮಂಗಳೂರು ಮಲಯಾಳಿ ಸಮಾಜಂ ನೇತೃತ್ವದಲ್ಲಿ ನಗರದ ಶ್ರೀನಿವಾಸ್ ಕಾಲೇಜು ಮಕ್ಕಳು ಮತ್ತು ಮಲಯಾಳಿ ಸಮಾಜಂ ಸ್ಟೂಡೆಂಟ್ ವಿಂಗ್‌ನ ‘ಸದ್ಗಮಯ’ದಿಂದ ಸಂಗ್ರಹಿಸಿದ ದಿನೋಪಯೋಗಿ ವಸ್ತುಗಳನ್ನು ಕೇರಳದ ವಯನಾಡ್ ಮತ್ತು ತ್ರಿಶ್ಯೂರ್ ಭಾಗದ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭ ಸಮಾಜದ ಅಧ್ಯಕ್ಷ ಲಾರೆನ್ಸ್ ಕಿಲ್ಲೂರು ಮತ್ತು ಕಾರ್ಯದರ್ಶಿ ಕುರಿಯಾಕೋಸ್ ಉಪಸ್ಥಿತರಿದ್ದರು.