ಶಿರ್ವದಲ್ಲಿ ಮಲ್ಲಿಗೆ ಕೃಷಿ ಮಾಹಿತಿ
Update: 2018-08-25 19:17 IST
ಉಡುಪಿ, ಆ.25: ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾಪು ವಲಯ ಸಮಿತಿ ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮವೊಂದನ್ನು ಆ. 28ರ ಬೆಳಗ್ಗೆ 11:00ಕ್ಕೆ ಶಿರ್ವದ ಸೊರ್ಪು ವಿಲಿಯಂ ಡಿಸೋ ಜರ ಮನೆ ವಠಾರದಲ್ಲಿ ಆಯೋಜಿಸಿದೆ.
ಮಾಹಿತಿದಾರರಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪಾಲ್ಗೊಳ್ಳ ಲಿದ್ದಾರೆ. ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾದಾಯಕವಾಗಿ ಮಲ್ಲಿಗೆ ಕೃಷಿ ಮಾಡುವ ಕ್ರಮ, ಅವುಗಳ ನಾಟಿ, ಆರೈಕೆ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿಯನ್ನು ಇದರಲ್ಲಿ ನೀಡಲಾಗುವುದು.
ಇದೇ ಸಂದರ್ದಲ್ಲಿ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಕಲ್ಲೊಟ್ಟು ರಾಘವೇಂದ್ರ ನಾಯಕ್‌ರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಕೃಷಿಕ ಸಂಘದ ಪ್ರಕಟಣೆ ತಿಳಿಸಿದೆ.