ಮಂಗಳೂರು: ಸೈಬರ್ ಕೆಫೆ ನೋಂದಣಿ ಕಡ್ಡಾಯ

Update: 2018-08-25 14:07 GMT

ಮಂಗಳೂರು, ಆ.25: ದ.ಕ. ಜಿಲ್ಲೆಯಲ್ಲಿ ಕಾನೂನಿನ್ವಯ ನೋಂದಾಯಿಸಿಕೊಳ್ಳದೇ ಕಾರ್ಯಾಚರಿಸುತ್ತಿರುವ ಸೈಬರ್ ಕೆಫೆ ಮಾಲಕರು ತಕ್ಷಣ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೈಬರ್ ಕೆಫೆಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿಸಿಕೊಳ್ಳದೇ ಇರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಕಲಂ 90 ಮತ್ತು ಮಾಹಿತಿ ತಂತ್ರಜ್ಞಾನ (ಸೈಬರ್ ಕೆಫೆಗಾಗಿ ಮಾರ್ಗದರ್ಶನ) ನಿಯಮಗಳು 2011ರ ನಿಯಮ 2 (ಬಿ) ಮತ್ತು ನಿಯಮ (3)ರಂತೆ ಸೈಬರ್ ಕೆಫೆಗಳನ್ನು ನೋಂದಣಿ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಿ ಸರಕಾರವು 2012ರ ಆ.30ರಂದು ಅಧಿಸೂಚನೆ ಹೊರಡಿಸಿತ್ತು.

ಈ ಬಗ್ಗೆ ಅರ್ಜಿ ನಮೂನೆ ಹಾಗೂ ಪೂರಕ ದಾಖಲೆಗಳನ್ನು ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್ https://dk.nic.in ನಲ್ಲಿ ಲಭ್ಯವಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News